
ಕಂಪ್ಲಿ: ಕಂಪ್ಲಿ ಉತ್ಸವದ ಪ್ರಯುಕ್ತ ಇಲ್ಲಿನ ಸೋಮಪ್ಪ ಕೆರೆಯಲ್ಲಿ ‘ತುಂಗಭದ್ರಾ ಆರತಿ’ ಬುಧವಾರ ರಾತ್ರಿ ವೈಭವದಿಂದ ಜರುಗಿತು.
ಶಾಸಕ ಜೆ.ಎನ್. ಗಣೇಶ ಕುಟುಂಬ ಸಹಿತರಾಗಿ ಬಾಗೀನ ಅರ್ಪಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಾರಣಾಸಿಯ ಗಂಗಾರತಿಯ ಅರ್ಚಕರ ತಂಡದವರು ಪೌರೋಹಿತ್ಯ ವಹಿಸಿದ್ದರು.
ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್‍ಖಾನ್, ಹೆಚ್ಚುವರಿ ಡಿಸಿ ಮಹಮ್ಮದ್ ಜುಬೇರ್, ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಕೆಎಂಎಫ್ ಮಾಜಿ ಅಧ್ಯಕ್ಷ ಭೀಮನಾಯ್ಕ, ಪ್ರಮುಖರಾದ ಕೆ. ಶ್ರೀನಿವಾಸರಾವ್, ಭಟ್ಟಪ್ರಸಾದ್, ಗೋಕುಲ್, ಗೌರವ್, ಪಿ. ಮೂಕಯ್ಯಸ್ವಾಮಿ, ಎನ್. ಹಬೀಬ್ ರೆಹಮಾನ್, ಸಿ.ಆರ್. ಹನುಮಂತ, ಕೆ. ಮಸ್ತಾನ್‍ಸಾಬ್, ಕೆ.ಎಸ್. ಚಾಂದ್‍ಬಾಷ, ಹೊಸಕೋಟೆ ಜಗದೀಶ್ ಸೇರಿ ಅನೇಕರು ಪಾಲ್ಗೊಂಡಿದ್ದರು.ಕೆರೆಯ ನೀರಿನಲ್ಲಿ ಬಿಟ್ಟಿದ್ದ ದೀಪಗಳು ಆಕರ್ಷಕವಾಗಿ ಕಂಡುಬಂದವು.
ಕೆರೆ ಸುತ್ತಲು ನಿರ್ಮಿಸಿದ 18 ವೇದಿಕೆಗಳಲ್ಲಿ ನೆರೆದಿದ್ದ ಜನರು ತುಂಗಭದ್ರಾ ಆರತಿ ಕಣ್ವೀತುಂಬಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸರ್ಕಾರಿ ನೌಕರರನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.