ADVERTISEMENT

ಕಾರ್ಗಿಲ್ ವಿಜಯೋತ್ಸವ ದಿವಸ; ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:42 IST
Last Updated 27 ಜುಲೈ 2025, 2:42 IST
ಧಾರವಾಡದ ಕಾರ್ಗಿಲ್ ಸ್ತೂಪ ಆವರಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದವರು ಹುತಾತ್ಮ ಯೋಧರ ಸ್ಮಾರಕಕ್ಕೆ ಶನಿವಾರ ನಮನ ಸಲ್ಲಿಸಿದರು
ಧಾರವಾಡದ ಕಾರ್ಗಿಲ್ ಸ್ತೂಪ ಆವರಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದವರು ಹುತಾತ್ಮ ಯೋಧರ ಸ್ಮಾರಕಕ್ಕೆ ಶನಿವಾರ ನಮನ ಸಲ್ಲಿಸಿದರು   

ಧಾರವಾಡ: ಕಾರ್ಗಿಲ್ ವಿಜಯೋತ್ಸವ ದಿವಸ ಆಚರಣೆ ಹಾಗೂ ಆಪರೇಷನ್ ಸಿಂಧೂರ ಯಶಸ್ವಿ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ತಿರಂಗಾ ಯಾತ್ರೆ ನಡೆಯಿತು.

ನಗರದ ಗಾಂಧಿ ಚೌಕದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ವಿಜಯ ಸ್ತೂಪದವರೆಗೆ ತಿರಂಗಾ ಯಾತ್ರೆ ನಡೆಯಿತು. ಯಾತ್ರೆಯೂದ್ದಕ್ಕೂ ಭಾರತ ಮಾತೆಗೆ ಜಯವಾಗಲಿ, ಜೈ ಜವಾನ್ ಜೈ ಕಿಸಾನ್, ವಂದೇ ಮಾತರಂ ಘೋಷಣೆ ಕೂಗಿದರು. ಮಾಜಿ ಸೈನಿಕರು, ಸೈನಿಕರು, ಎನ್‍ಸಿಸಿ ಘಟಕದವರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.

ಯಾತ್ರೆಯು ವಿವೇಕಾನಂದ ವೃತ್ತ, ಜುಬಲಿ ವೃತ್ತ, ಹಳೇ ಬಸ್ ನಿಲ್ದಾಣ, ಆಝಾದ್ ಉದ್ಯಾನ, ಜುಬಿಲಿ ವೃತ್ತ, ಕೋರ್ಟ್ ವೃತ್ತ, ಮುಖ್ಯ ಅಂಚೇರಿ ಕಚೇರಿ ವೃತ್ತದ ಮಾರ್ಗವಾಗಿ ಕಾರ್ಗಿಲ್ ಸ್ತೂಪ ತಲುಪಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.

ADVERTISEMENT

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಬಿಜೆಪಿ ಮುಖಂಡೆ ಸವಿತಾ ಅಮರಶೆಟ್ಟಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿಂಗಪ್ಪ ಸಿಂಗೋಟಿ, ಉಪಾಧ್ಯಕ್ಷ ಪರಶುರಾಮ ನವಲಗುಂದ, ಪದಾಧಿಕಾರಿಗಳಾದ ವೀರಪ್ಪ ಹಸಬಿ, ಬಸಪ್ಪ ಕೊಪ್ಪದ, ಬಸಪ್ಪ ಗಂಗೇರ, ಪ್ರಕಾಶ ಬಡಿಗೇರ, ಪ್ರಕಾಶ ಬಡಿಗೇರ, ಮಲ್ಲಪ್ಪ ನಾಯ್ಕರ್, ನಿರ್ಮಲಾ ನವಲಗುಂದ, ಸುನಂದಾ ಕೋರೆ, ನಿರ್ಮಲಾ ಮಲ್ಲಪ್ಪ ಕನ್ನಿ, ನಿರ್ಮಲಾ ನೀಲಗುಂದ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.