ಹೂವಿನಹಡಗಲಿ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಹೊಳಗುಂದಿ ಎಎಂಪಿಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಅಂಬಿಕಾ ಹಾವನೂರು (ಶೇ 97.44) ಗರಿಷ್ಠ ಅಂಕ ಗಳಿಸಿ, ಶಾಲೆಯ ಟಾಪರ್ ವಿದ್ಯಾರ್ಥಿನಿಯಾಗಿದ್ದಾರೆ.
ತುಂಗಭದ್ರಾ ಪ್ರೌಢಶಾಲೆಗೆ ಶೇ 90 ಫಲಿತಾಂಶ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ತುಂಗಭದ್ರಾ ಪ್ರೌಢಶಾಲೆಗೆ ಶೇ 90 ರಷ್ಟು ಫಲಿತಾಂಶ ಲಭಿಸಿದೆ ಎಂದು ಮುಖ್ಯ ಶಿಕ್ಷಕ ಸುರೇಶ ಅಂಗಡಿ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 111 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 14 ಡಿಸ್ಟಿಂಕ್ಷನ್, 54 ಪ್ರಥಮ, 28 ದ್ವಿತೀಯ, 4 ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಈಟಿ ಸುನೀಲ್ ಕುಮಾರ್ (ಶೇ96.12), ಕೆ.ಕುಸುಮ (ಶೇ 93.12), ಆರ್.ಯಶಸ್ವಿನಿ (93.12), ಈಟಿ ರೇಖಾ (ಶೇ 91.36), ಎಚ್.ಪ್ರಿಯಾಂಕ (ಶೇ 91.2), ಭಗವಂತಪ್ಪ ಮೇಟಿ (ಶೇ 91) ಗರಿಷ್ಠ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ತುಂಗಭದ್ರಾ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಪ್ರಶಂಸಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.