ಹೂವಿನಹಡಗಲಿ: ಇಲ್ಲಿನ ರುದ್ರಾಂಬ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮೈಸೂರಿನ ಕವಿತಾ ಕಲಾತಂಡ ಪ್ರಸ್ತುತಿಪಡಿಸಿದ ‘ಕೌದಿ’ ನಾಟಕ ವಿದ್ಯಾರ್ಥಿಗಳ ಮನಸೊರೆಗೊಂಡಿತು.
ಅಲೆಮಾರಿಗಳ ಬದುಕು ಬವಣೆ ಕುರಿತ ಏಕವ್ಯಕ್ತಿಯ ನಾಟಕದಲ್ಲಿ ಕಲಾವಿದೆ ಭ್ಯಾಗ್ಯಶ್ರೀ ಪಾಳ ಮನೋಜ್ಞವಾಗಿ ಅಭಿನಯಿಸಿದರು.
ಉಪನ್ಯಾಸಕ ಸತೀಶ ಪಾಟೀಲ್ ಮಾತನಾಡಿ, ಅಲೆಮಾರಿಗಳ ಬದುಕನ್ನು ಪ್ರತಿನಿಧಿಸುವ ಈ ನಾಟಕವನ್ನು ವಿದ್ಯಾರ್ಥಿಗಳು ವೀಕ್ಷಿಸಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾಟಕ ರಚನೆಕಾರ ಗಣೇಶ್ ಅಮಿನಗಡ ಮಾತನಾಡಿ, ಉತ್ತರ ಕರ್ನಾಟಕದ ಸೌಹಾರ್ದ, ಸಾಮರಸ್ಯ, ಸಮುದಾಯದ ಸಂಕಟವನ್ನು ಈ ನಾಟಕ ಪ್ರತಿಬಿಂಬಿಸಿದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಪಿ.ಕೊಟ್ರೇಶ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಎಚ್.ವೆಂಕಟೇಶ, ಉಪನ್ಯಾಸಕರಾದ ಸುರೇಶ್ ಬೂದನೂರು, ಜಿ.ಟಿ.ಉಮಾ, ಸುನಿತಾ ದೇವಿ, ಹನುಮಂತಪ್ಪ, ಕೆ.ರೀಟಾ, ಶ್ರೀಕಾಂತ ರಾಥೋಡ್, ಭಾಗ್ಯಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.