ADVERTISEMENT

ಸಂಡೂರು | ಬಿಕೋ ಎಂದ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:54 IST
Last Updated 6 ಆಗಸ್ಟ್ 2025, 4:54 IST
<div class="paragraphs"><p><strong>ಕುಡತಿನಿ ಪಟ್ಟಣದಲ್ಲಿನ ಸಾರಿಗೆ ಬಸ್ ನಿಲ್ದಾಣವು ಮಂಗಳವಾರ ಬಸ್‍ಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತೀರುವುದು</strong></p></div>

ಕುಡತಿನಿ ಪಟ್ಟಣದಲ್ಲಿನ ಸಾರಿಗೆ ಬಸ್ ನಿಲ್ದಾಣವು ಮಂಗಳವಾರ ಬಸ್‍ಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತೀರುವುದು

   

ಸಂಡೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಮಂಗಳವಾರ ನಡೆದ ಮುಷ್ಕರದಿಂದ ಸಾರಿಗೆ ಬಸ್‍ಗಳ ಸಂಚಾರವು ಬಹಳ ವಿರಳವಾಗಿದ್ದರಿಂದ ವಿವಿಧ ಗ್ರಾಮ, ದೂರದ ಪಟ್ಟಣಗಳಿಗೆ ತೆರಳುವ ಪ್ರಯಾಣಿಕರು ಬಸ್‍ಗಳಿಗಾಗಿ ದಿನವಿಡೀ ಪರದಾಡಿದರು.

ಸಂಡೂರು ಪಟ್ಟಣ, ಸುತ್ತಲಿನ ಗ್ರಾಮಗಳಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳ, ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ಸಾರಿಗೆ ಬಸ್ ಡಿಪೋ ದಿಂದ ಸುಮಾರು 40 ಬಸ್‍ಗಳ ಸಂಚಾರ ಆರಂಭಿಸಲಾಗಿತ್ತು.

ADVERTISEMENT

ಬೆಳಿಗ್ಗೆ ಪುರಸಭೆಯ ಬಸ್ ನಿಲ್ದಾಣದಲ್ಲಿ ಎಲ್ಲ ಸಾರಿಗೆ ಬಸ್‍ಗಳನ್ನು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು, ನಂತರ ಜನರ, ವಿದ್ಯಾರ್ಥಿಗಳ ಸಂಚಾರದ ಅನುಕೂಲಕ್ಕಾಗಿ ಸಾರಿಗೆ ಅಧಿಕಾರಿಗಳು ಬಸ್‍ಗಳ ಸೇವೆಯನ್ನು ಹಂತ ಹಂತವಾಗಿ ಆರಂಭಿಸಲಾಯಿತು.

‘ಸಂಡೂರು ಪಟ್ಟಣದಿಂದ ಕುಡತಿನಿ, ಹೊಸಪೇಟೆ, ಕೂಡ್ಲಿಗಿಯವರೆಗೂ ಸಾರಿಗೆ ಬಸ್‍ಗಳನ್ನು ಓಡಿಲಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ಬಸ್‍ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಬಾರದು ಎನ್ನುವ ದೃಷ್ಠಿಯಿಂದ ಸಾರಿಗೆ ನೌಕರರು ಕೆಲಸಕ್ಕೆ ಹಾಜರಿಯಾಗಿದ್ದರು’ ಎಂದು ಸಂಡೂರಿನ ಸಾರಿಗೆ ಇಲಾಖೆಯ ವ್ಯವಸ್ಥಾಪಕ ಲಕ್ಷ್ಮಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.