ಕುರುಗೋಡು: ಪಟ್ಟಣದ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ನರಸಪ್ಪ ರಸಗೊಬ್ಬರ, ಬೀಜ ಮತ್ತು ಕ್ರಿಮಿನಾಶಕಗಳ ದಾಸ್ತಾನು ಪರಿಶೀಲಿಸಿದರು.
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗಿದೆ. ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಅಗತ್ಯವಿದೆ. ರೈತರಿಗೆ ಬೇಕಾಗುವ ಕೃಷಿ ಪರಿಕರಗಳನ್ನು ನಿಗದಿತ ಬೆಲೆಯಲ್ಲಿ ಮಾರಾಟಮಾಡಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ರಸಗೊಬ್ಬರ, ಬೀಜ ಮತ್ತು ಕ್ರಿಮಿನಾಶಕ ಕೃತಕ ಮುಗ್ಗಟ್ಟು ಸೃಷ್ಟಿಸಿದರೆ ಮಾರಾಟ ಪರವಾನಗಿ ರದ್ದುಗೊಳಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಕೆ.ಗರ್ಜೆಪ್ಪ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಾಲ್ಲೂಕಿನ ರೈತರು ಮೆಣಸಿನಕಾಯಿ ಬದಲು ಮೆಕ್ಕೆಜೋಳ ಬೆಳೆಯತ್ತ ವಾಲಿದ್ದಾರೆ ಎಂದರು.
ಯೂರಿಯಾ ರಸಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಯೂರಿಯಾ ರಸಗೊಬ್ಬರದ ಸಣ್ಣ ಮತ್ತು ದಪ್ಪನೆಯ ಹರಳಿನಲ್ಲಿ ಯಾವುದೇ ಸಾರಜನಕ ಅಂಶದ ವ್ಯತ್ಯಾಸ ಇರುವುದಿಲ್ಲ. ಎರಡರಲ್ಲಿಯೂ ಶೇ 46ರಷ್ಟು ಪ್ರಮಾಣದಲ್ಲಿ ಸಾರಜನಕವಿರುತ್ತದೆ. ರೈತರು ಗೊಂಡಲಕ್ಕೀಡಾಗುವುದು ಬೇಡ. ಸದ್ಯ ತಾಲ್ಲೂಕಿನಲ್ಲಿ ಯೂರಿಯಾ ರಸಗೊಬ್ಬರ ಅಭಾವವಿಲ್ಲ ಎಂದು ಸಲಹೆ ನೀಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ ಇದ್ದರು.
ಕೃಷಿ ಪರಿಕರಗಳ ಮಾರಾಟಗಾರರು ಕಡ್ಡಾಯವಾಗಿ ಬೀಜ ರಸಗೊಬ್ಬರ ಮತ್ತು ಕ್ರಿಮಿನಶಕದ ದಾಸ್ತಾನು ಮಾಹಿತಿಯಲ್ಲಿ ಫಲಕದಲ್ಲಿ ನಮೂದಿಸಬೇಕುನರಸಪ್ಪ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.