ಹೊಸಪೇಟೆ (ವಿಜಯನಗರ): ಕೆ.ವಿ. ಬಸವರಾಜ ಹೊಸಪೇಟೆ ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೊಸ ಪದಾಧಿಕಾರಿಗಳು 2021 ರಿಂದ 2023ರ ವರೆಗೆ ಕೆಲಸ ನಿರ್ವಹಿಸುವರು. ಪದಾಧಿಕಾರಿಗಳ ವಿವರ ಹೀಗಿದೆ.
ಈ.ವಿ.ಅಂಬನಗೌಡ (ಉಪಾಧ್ಯಕ್ಷ), ಎ.ಕರುಣಾನಿಧಿ (ಪ್ರಧಾನ ಕಾರ್ಯದರ್ಶಿ), ಮಹಾರಾಜ ರವಿ(ಜಂಟಿ ಕಾರ್ಯದರ್ಶಿ), ಸಿ.ಎಂ.ಶಿವಪ್ರಕಾಶ (ಖಜಾಂಚಿ) ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಲ್.ಎಸ್.ಆನಂದ ಮತ್ತು ರಾಜಾ ಮೊಹಮ್ಮದ್ ಎನ್.ಬಡಿಗೇರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.