ADVERTISEMENT

ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ: ನಿರೀಕ್ಷೆಗೂ ಮೀರಿ ಹೆಚ್ಚಿನ ಜನ ಬಂದರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 6:40 IST
Last Updated 3 ಅಕ್ಟೋಬರ್ 2021, 6:40 IST
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಹೊಸಪೇಟೆ (ವಿಜಯನಗರ): ಶನಿವಾರ ಸಂಜೆ ಇಲ್ಲಿ ನಡೆದ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭಕ್ಕೆ ನಿರೀಕ್ಷೆಗೂ ಮೀರಿ ಜನ ಬಂದರು.

ಕಾರ್ಯಕ್ರಮ ವೀಕ್ಷಣೆಗೆ ಪಾಸ್‌ ಕಡ್ಡಾಯಗೊಳಿಸಲಾಗಿತ್ತು. ಪಾಸು ಇದ್ದವರು ಒಳಗೆ ಬಂದು ಆಸೀನರಾಗಿದ್ದರು. ಆದರೆ, ಪಾಸು ಇರದಿದ್ದವರೂ ಶತಾಯ ಗತಾಯ ಪ್ರಯತ್ನ ಮಾಡಿದರೂ ಪೊಲೀಸರು ಒಳಗೆ ಬಿಡಲಿಲ್ಲ.

ಹಂಪಿ ಮರು ಸೃಷ್ಟಿ ಮಾಡಿ, ದೊಡ್ಡ ವೇದಿಕೆ ನಿರ್ಮಿಸಿದ್ದರಿಂದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಆದರೆ, ಪಾಸ್‌ ಇರದಿದ್ದವರಿಗೆ ಪ್ರವೇಶ ಸಿಗಲಿಲ್ಲ. ವಿಷಯ ತಿಳಿದು ಕೆಲವರು ಸಪ್ಪೆ ಮುಖ ಮಾಡಿ ಹಿಂತಿರುಗಿದರು. ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಬಳಿಕ ಹೊರಟರು.

ADVERTISEMENT

ಕಾರ್ಯಕ್ರಮ ವೀಕ್ಷಣೆಗೆ ಎರಡು ಸಾವಿರ ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಅದಕ್ಕೂ ನಾಲ್ಕೈದು ಪಟ್ಟು ಹೆಚ್ಚಿಗೆ ಜನ ಸೇರಿದ್ದರು. ರಸ್ತೆಯ ಇಕ್ಕೆಲ, ಕಟ್ಟಡಗಳ ಮೇಲೆ ನಿಂತು ಕೆಲವರು ಕಾರ್ಯಕ್ರಮ ಕಣ್ತುಂಬಿಕೊಂಡರು.

₹ 5 ಕೋಟಿ ಖರ್ಚು ಮಾಡಿ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವ ಕಾರ್ಯಕ್ರಮವನ್ನು ಜನಸಾಮಾನ್ಯರನ್ನು ಹೊರಗಿಟ್ಟು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.