ADVERTISEMENT

ಹೊಸಪೇಟೆ: ಪಡಿತರ ಪಡೆಯಲು ಅಂತರ ಮರೆತ ಜನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 12:27 IST
Last Updated 13 ಮೇ 2021, 12:27 IST
ಹೊಸಪೇಟೆಯ ಚಪ್ಪರದಹಳ್ಳಿಯ 49ನೇ ನ್ಯಾಯಬೆಲೆ ಅಂಗಡಿ ಎದುರು ಜನ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತು ಗುರುವಾರ ರೇಷನ್‌ ಪಡೆದರು
ಹೊಸಪೇಟೆಯ ಚಪ್ಪರದಹಳ್ಳಿಯ 49ನೇ ನ್ಯಾಯಬೆಲೆ ಅಂಗಡಿ ಎದುರು ಜನ ಅಂತರ ಕಾಯ್ದುಕೊಳ್ಳದೆ ಸಾಲಿನಲ್ಲಿ ನಿಂತು ಗುರುವಾರ ರೇಷನ್‌ ಪಡೆದರು   

ಹೊಸಪೇಟೆ (ವಿಜಯನಗರ): ಕೋವಿಡ್‌ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವ ಅವಧಿ ನಿಗದಿಗೊಳಿಸಿರುವುದರಿಂದ ನಿತ್ಯ ಅಂಗಡಿಗಳ ಎದುರು ಜನದಟ್ಟಣೆ ಉಂಟಾಗುತ್ತಿದೆ‌. ಅಂತರ ಕಾಯ್ದುಕೊಳ್ಳದೆ ಜನ ನಿಲ್ಲುತ್ತಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಕಳೆದ ಒಂದು ವಾರದಿಂದ ವಿವಿಧ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ ಮೇ ಮತ್ತು ಜೂನ್ ತಿಂಗಳ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಬೆಳಿಗ್ಗೆ 7ರಿಂದ 10ಗಂಟೆಯವರೆಗೆ ಪಡಿತರ ವಿತರಿಸಲಾಗುತ್ತಿದ್ದು, ಫಲಾನುಭವಿಗಳು ಬೆಳಿಗ್ಗೆ 5 ಗಂಟೆಯಿಂದಲೇ ನ್ಯಾಯಬೆಲೆ ಅಂಗಡಿ ಮುಂದೆ ಜಮಾಯಿಸುತ್ತಿದ್ದಾರೆ.

ಶುಕ್ರವಾರ (ಮೇ 14) ಬಸವ ಜಯಂತಿ, ಈದ್‌–ಉಲ್‌–ಫಿತ್ರ ಇರುವುದರಿಂದ ಗುರುವಾರ ರೇಷನ್‌ ಪಡೆದುಕೊಳ್ಳಲು ಹೆಚ್ಚಿನ ಜನ ಸೇರಿದ್ದರು. ಅವಧಿ ಮುಗಿದಿದ್ದರಿಂದ ಹಲವರು ರೇಷನ್‌ ಪಡೆಯಲಾಗದೆ ಹಿಂತಿರುಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.