ADVERTISEMENT

ಹೊಸಪೇಟೆ ತಾಲ್ಲೂಕಿನ ಕಾಕುಬಾಳು ಗ್ರಾಮ: ಚಿರತೆ ದಾಳಿಗೆ 12 ಕುರಿ ಬಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 7:37 IST
Last Updated 1 ಸೆಪ್ಟೆಂಬರ್ 2019, 7:37 IST
ಚಿರತೆ ದಾಳಿಗೆ ಕುರಿಗಳು ಮೃತಪಟ್ಟಿವೆ
ಚಿರತೆ ದಾಳಿಗೆ ಕುರಿಗಳು ಮೃತಪಟ್ಟಿವೆ   

ಹೊಸಪೇಟೆ: ತಾಲ್ಲೂಕಿನ ಕಾಕುಬಾಳು ಗ್ರಾಮದ ಹೊರವಲಯದಲ್ಲಿ ಶನಿವಾರ ತಡರಾತ್ರಿ ಕುರಿ ಹಟ್ಟಿ ಮೇಲೆ ಚಿರತೆ ದಾಳಿ ನಡೆಸಿ, ಹನ್ನೆರಡು ಕುರಿಗಳನ್ನು ಸಾಯಿಸಿದೆ.

ಬೋಳುಬಾಯಿ ಹನುಮಂತಪ್ಪ ಎಂಬುವರಿಗೆ ಈ ಕುರಿಗಳು ಸೇರಿದ್ದವು. ‘ಚಿರತೆ ದಾಳಿ ನಡೆಸಿ ನಮ್ಮ ಹನ್ನೆರಡು ಕುರಿಗಳನ್ನು ಸಾಯಿಸಿದೆ. ತಡರಾತ್ರಿ ಕುರಿಗಳು ಏಕಾಏಕಿ ಜೋರಾಗಿ ಕಿರುಚಲು ಆರಂಭಿಸಿದವು. ನಾಲ್ಕೈದು ಜನ ಹೋಗಿ ನೋಡಿದಾಗ ಚಿರತೆ ಕುರಿಗಳ ರಕ್ತ ಹೀರುತ್ತಿತ್ತು. ನಮ್ಮನ್ನು ಕಂಡೊಡನೆ ಅಲ್ಲಿಂದ ಚಂಗನೆ ಓಡಿ ಹೋಗಿದೆ. ಸ್ವಲ್ಪ ತಡವಾದರೂ ಇನ್ನಷ್ಟು ಕುರಿಗಳನ್ನು ಅದು ಸಾಯಿಸುತ್ತಿತ್ತು’ ಎಂದು ಹನುಮಂತಪ್ಪ ತಿಳಿಸಿದರು.

‘ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆಗೆ ಹಲವು ಸಲ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಇಲಾಖೆ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ರೀತಿ ಆಗಿದೆ. ಈಗ ಇಲಾಖೆಯೇ ಸತ್ತ ಕುರಿಗಳ ಪರಿಹಾರ ಭರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಘಟನೆ ನಡೆದ ಬಳಿಕ ಅರಣ್ಯ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.