ADVERTISEMENT

ಹರಪನಹಳ್ಳಿ: ‘ಕಾಯಕ, ದಾಸೋಹ ತತ್ವದ ಮೇಲೆ ಮಠ ಬೆಳೆಸಿದ ಶ್ರೀ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:33 IST
Last Updated 3 ಡಿಸೆಂಬರ್ 2025, 5:33 IST
<div class="paragraphs"><p>ಹರಪನಹಳ್ಳಿಯಲ್ಲಿ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ 11ನೇ ಪುಣ್ಯಾರಾಧನೆ ಹಾಗೂ ವರಸದ್ಯೋಜಾತ ಶಿವಾಚಾರ್ಯರ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು. ಉಜ್ಜಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು</p></div>

ಹರಪನಹಳ್ಳಿಯಲ್ಲಿ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ 11ನೇ ಪುಣ್ಯಾರಾಧನೆ ಹಾಗೂ ವರಸದ್ಯೋಜಾತ ಶಿವಾಚಾರ್ಯರ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು. ಉಜ್ಜಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು

   

ಹರಪನಹಳ್ಳಿ: ಮದ್ಯಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ನೆರವಾದ ಲಿಂಗೈಕ್ಯ ಚಂದ್ರಮೌಳೀಶ್ವರರು ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ತೆಗ್ಗಿನಮಠ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 11ನೇ ವರ್ಷದ ಪುಣ್ಯಾರಾಧನೆ ಹಾಗೂ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳವರ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ADVERTISEMENT

ತೆಗ್ಗಿನಮಠವನ್ನು ಶಿಖರ ಮಠವನ್ನಾಗಿ ಮಾಡುವಲ್ಲಿ ಚಂದ್ರ ಮೌಳೀಶ್ವರರ ಪಾತ್ರ ದೊಡ್ಡದು. ಉಜ್ಜಿಯಿನಿ ಪೀಠ ಮತ್ತು ತೆಗ್ಗಿನಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಒಡನಾಟ ಸ್ಮರಿಸಿದರು.

ಉದ್ಘಾಟಿಸಿದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಹರಪನಹಳ್ಳಿ ಅಭಿವೃದ್ದಿಗೆ ಉಜ್ಜಯಿನಿ ಪೀಠ, ತೆಗ್ಗಿನಮಠ, ತರಳಬಾಳು ಮಠ, ವೀ.ವಿ.ಎಸ್.ಸಂಸ್ಥೆಗಳು ಕೊಡುಗೆ ನೀಡಿವೆ. ಅನುದಾನ ಬಾರದ ಕಾಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದ್ದ ಚಂದ್ರಮೌಳೀಶ್ವರರ ಸೇವೆ ನಾಡಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, 'ಧರ್ಮ ಪ್ರಚಾರಕ್ಕಾಗಿ ವೀರಶೈವ ಸಂಚಾರಿ ಧರ್ಮ ಸ್ಥಾಪಿಸಿದ ಕೀರ್ತಿ ತೆಗ್ಗಿನಮಠದ ಲಿಂಗೈಕ್ಯ ಚಂದ್ರಮೌಳೀಶ್ವರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ನಮ್ಮ ಹಾಗೂ ಸಂಸ್ಥೆಯ ಬಗ್ಗೆ ಯಾರೇ ಏನೆ ನಿಂದಿಸಿದರು ಗಣನೆಗೆ ತೆಗೆದುಕೊಳ್ಳದೇ ಮಠ ಉತ್ತುಂಗಕ್ಕೆ ಬೆಳೆಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ' ಎಂದರು.

ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ಚಂದ್ರಮೌಳೀಶ್ವರರು 68 ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಶಿಕ್ಷಣ ಮತ್ತು ಜ್ಞಾನ ದಾಸೋಹಕ್ಕೆ ಆಧ್ಯತೆ ಕೊಟ್ಟಿದ್ದರು.ಈಗಿನ ಶ್ರೀಗಳು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಶಿವಗಂಗೆ ಮೇಲಗಣವಿ ಸಂಸ್ಥಾನದ ಮಲಯಶಾಂತಮುನಿ ಸ್ವಾಮೀಜಿ, ‘ಕ್ರಿಯಾಶೀಲತೆ ಹೊಂದಿರುವ ಮಠಾಧೀಶರು ಸಮಾಜದಲ್ಲಿ ಗಮನ ಸೆಳೆಯುತ್ತಾರೆ’ ಎಂದು ಲಿಂಗೈಕ್ಯ ಸ್ವಾಮೀಜಿ ಅವರನ್ನು ಹಾಗೂ ಅವರ ಸಾಧನೆಗಳನ್ನು ಸ್ಮರಿಸಿದರು.

ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ನಂಜನಗೌಡ್ರು, ಉಜ್ಜಿನಿ ಪೀಠದ ಕಾರ್ಯದರ್ಶಿ ಎಂ.ಎಂ.ಜೆ.ಹರ್ಷವರ್ಧನ, ಕೆಪಿಸಿಸಿ ಸದಸ್ಯೆ ಎಂ.ಪಿ.ವೀಣಾ ಮಹಾಂತೇಶ್, ಡಾ.ಎಸ್.ಎನ್.ಮಹೇಶ್ ಮಾತನಾಡಿದರು. ಉದ್ಯಮಿ ಪದ್ಮಾವತಿ, ಶಶಿಧರ ಪೂಜಾರ್, ಟಿ.ಎಂ.ವಿಜಯಕುಮಾರ, ಅನಿಲ್ ಕುಮಾರ, ಟಿ.ಎಂ.ಶಿವಶಂಕರ, ಟಿ.ಎಂ.ನಾಗರಾಜ್, ಟಿ.ಎಂ.ಚನ್ನವೀರ ಸ್ವಾಮಿ, ಟಿ.ಎಂ.ಪ್ರತೀಕ, ಎ.ಕರಿಬಸವರಾಜ್, ಜಿ.ಎಸ್.ಉಮಾಶಂಕರ, ಬಿ.ಎಂ.ಉಮಾದೇವಿ, ಸಿ.ಎಂ.ಕೊಟ್ರಯ್ಯ, ಮಡಿವಾಳಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.