ADVERTISEMENT

ಮದ್ಯ ಮಾರಾಟ: ರಾಜ್ಯದ 19 ಜಿಲ್ಲೆಗಳಲ್ಲಿ ಕುಸಿತ

ಅಬಕಾರಿ ಸುಂಕ ನಿರಂತರ ಹೆಚ್ಚಳ; ಆಂಧ್ರ ಅಬಕಾರಿ ನೀತಿ ಪರಿಣಾಮ

ಆರ್. ಹರಿಶಂಕರ್
Published 23 ಮೇ 2025, 6:22 IST
Last Updated 23 ಮೇ 2025, 6:22 IST
ಮದ್ಯದಂಗಡಿಯ ಚಿತ್ರ
ಮದ್ಯದಂಗಡಿಯ ಚಿತ್ರ   

ಬಳ್ಳಾರಿ: ರಾಜ್ಯದ 19 ಜಿಲ್ಲೆಗಳಲ್ಲಿ 2024–25ನೇ ಸಾಲಿನಲ್ಲಿ ಮದ್ಯ ಮಾರಾಟ ಗಣನೀಯವಾಗಿ ಕುಸಿದಿದೆ. ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ.

2023–24ನೇ ಸಾಲಿನಲ್ಲಿ 705.53 ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದರೆ, 2024–25ನೇ ಸಾಲಿನಲ್ಲಿ ರಾಜ್ಯದಲ್ಲಿ 708.85 ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆ. ಒಟ್ಟಾರೆ 0.47ರಷ್ಟು ಮಾತ್ರ ಪ್ರಗತಿ ಆಗಿದೆ.

ಮದ್ಯ ಮಾರಾಟ ಪ್ರಮಾಣ ಕುಸಿಯಲು ಹಲವು ಕಾರಣಗಳಿದ್ದು, ಅವುಗಳಲ್ಲಿ ಎರಡು ವರ್ಷಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ನಾಲ್ಕು ಬಾರಿ ಹೆಚ್ಚಳ ಮಾಡಿದ್ದು ಪ್ರಮುಖ ಕಾರಣ. ಆಂಧ್ರ ಅಬಕಾರಿ ನೀತಿ, ಭತ್ತ, ಕೃಷಿ ಉತ್ಪನ್ನಗಳ ಬೆಲೆ ಕುಸಿತ ಸೇರಿ ಹಲವು ಅಂಶಗಳು ಕೂಡ ಪರಿಣಾಮ ಬೀರಿವೆ.

ADVERTISEMENT

ಗಡಿ ಜಿಲ್ಲೆಗಳಲ್ಲಿ ಆಂಧ್ರ ಪ್ರಭಾವ:

ಆಂಧ್ರ ಪ್ರದೇಶ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮದ್ಯ ಮಾರಾಟ ತೀವ್ರವಾಗಿ ಕುಸಿದಿದೆ. ರಾಜ್ಯದ ಮದ್ಯವನ್ನು ಆಂಧ್ರ ಪ್ರದೇಶದವರು ಹೆಚ್ಚು ಖರೀದಿಸುತ್ತಿದ್ದರು. ಆದರೆ, ಈಗ ಆಂಧ್ರ ಪ್ರದೇಶದಲ್ಲಿ ಮದ್ಯವು ಕನಿಷ್ಠ ₹ 99ಕ್ಕೆ ಲಭ್ಯವಾಗುತ್ತಿದೆ. ಅನ್ಯರಾಜ್ಯದ ಮದ್ಯ ಸಾಗಣೆ ನಿರ್ಬಂಧಿಸಲಾಗಿದೆ. ಈ ಎಲ್ಲಾ ಕಾರಣದಿಂದ ಮದ್ಯ ಮಾರಾಟದ ಪ್ರಮಾಣ ಕುಸಿದಿದೆ. 

ಬೆಂಗಳೂರಿನಲ್ಲಿ ಪ್ರಗತಿ: ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಶೇ 9.77ರಷ್ಟು ಪ್ರಗತಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ವಿವಿಧ ವಿಭಾಗಗಳಲ್ಲೂ ಉತ್ತಮ ಪ್ರಗತಿ ಕಂಡು ಬಂದಿದೆ.

ಎನ್‌. ಮಂಜುನಾಥ್‌ 
ಆಂಧ್ರ ಪ್ರದೇಶದ ಅಬಕಾರಿ ನೀತಿ ಬಿಗಿ ಕ್ರಮಗಳು ಗಡಿ ಜಿಲ್ಲೆಗಳ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಿವೆ. ಇದರ ಜತೆಗೆ ಕೃಷಿ ಸೇರಿ ಹಲವು ಅಂಶಗಳು ಪ್ರಭಾವವೂ ಇದೆ.
ಎನ್‌. ಮಂಜುನಾಥ್‌ ಉಪ ಆಯುಕ್ತ ಅಬಕಾರಿ ಇಲಾಖೆ ಬಳ್ಳಾರಿ

ಮಾರಾಟ ಕುಸಿತ (ಶೇಕಡವಾರು)

ಬಳ್ಳಾರಿ; 8.41 ರಾಯಚೂರು;4.41 ಕೋಲಾರ; 4.36 ಚಿಕ್ಕಬಳ್ಳಾಪುರ;3.75 ದಾವಣಗೆರೆ; 3.40 ಚಿತ್ರದುರ್ಗ;2.43 ಶಿವಮೊಗ್ಗ; 2.23 ತುಮಕೂರು; 2.07 ಉಡುಪಿ; 1.89 ವಿಜಯನಗರ; 1.75 ಬೆಂಗಳೂರು ನಗರ ಜಿಲ್ಲೆ(ವಿಭಾಗ 4); 1.46 ಹಾವೇರಿ; 1.46 ಉತ್ತರ ಕನ್ನಡ; 1.42 ದಕ್ಷಿಣ ಕನ್ನಡ; 1.36 ಬೆಳಗಾವಿ ಉತ್ತರ; 0.53 ಚಿಕ್ಕಮಗಳೂರು; 0.43 ಬೀದರ್‌; 0.23 ರಾಮನಗರ; 0.20 ಕೊಪ್ಪಳ; 0.02

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.