ADVERTISEMENT

ಬಳ್ಳಾರಿ: ರಿಯಾಯಿತಿ ದರದ ಆಕ್ಸಿಮೀಟರ್‌ಗಾಗಿ ಉದ್ದನೆ ಸಾಲು!

​ಪ್ರಜಾವಾಣಿ ವಾರ್ತೆ
Published 19 ಮೇ 2021, 2:25 IST
Last Updated 19 ಮೇ 2021, 2:25 IST
ಬಳ್ಳಾರಿ: ರಿಯಾಯಿತಿ ದರದ ಆಕ್ಸಿಮೀಟರ್‌ಗಾಗಿ ಉದ್ದನೆ ಸಾಲು!
ಬಳ್ಳಾರಿ: ರಿಯಾಯಿತಿ ದರದ ಆಕ್ಸಿಮೀಟರ್‌ಗಾಗಿ ಉದ್ದನೆ ಸಾಲು!   

ಬಳ್ಳಾರಿ: ರಿಯಾಯಿತಿ ದರದಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಾ ಮೀಟರ್, ಎನ್ 95 ಮಾಸ್ಕ್ ಮತ್ತು ಸ್ಟೀಮರ್ ಅನ್ನು ಜೈನ್ ಯುವಕ ಸಂಘದಿಂದ ಖರೀದಿಸಲು ನಗರದ ಬಿಡಿಎಎ ಸಭಾಂಗಣ ಮುಂಭಾಗ ಬೆಳಿಗ್ಗೆಯೇ ನೂರಾರು ಮಂದಿ ಉದ್ದನೆಯ ಸಾಲಿನಲ್ಲಿ ನಿಂತಿದ್ದರು.

ಯುವಕ ಸಂಘವು ಆಕ್ಸಿಮೀಟರ್ ಅನ್ನು ₹ 450ಕ್ಕೆ, ಥರ್ಮಾಮೀಟರ್ ಹಾಗೂ ಸ್ಟೀಮರ್ ಅನ್ನು ತಲಾ ₹150ಕ್ಕೆ ಹಾಗೂ ಮಾಸ್ಕ್ ಅನ್ನು ತಲಾ ₹20ಕ್ಕೆ ಮಾರಾಟ ಮಾಡುವುದಾಗಿ ನೀಡಿದ್ದ ಪ್ರಕಟಣೆಯು ನಗರದ ನೂರಾರು ವಾಟ್ಸ್ ಅಪ್ ಗುಂಪುಗಳಲ್ಲಿ ಮಂಗಳವಾರ ಸಂಜೆಯಿಂದಲೇ ಹರಿದಾಡಿದ್ದರಿಂದ ಹೆಚ್ಚಿನ ಸಂಖ್ಯೆಯ ಜನನೆರೆದಿದ್ದರು.

ಶಾಸನ್ ಸೇವಾ ಗ್ರುಪ್ ನೆರವಿನೊಂದಿಗೆ ಸಂಘ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಹೆಚ್ಚುವರಿ ದರದ ಹಣವನ್ನು ಗ್ರೂಪ್ ಭರಿಸಲಿದೆ ಎಂದು ಸಂಘದ ಪ್ರಮುಖರಾದ ಅಕ್ಷತ್ ಜೈನ್ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಬೆಳಿಗ್ಗೆ 6.30ಕ್ಕೆ ಶಾಸಕ ಜಿ.ಸೋಮಶೇಖರರೆಡ್ಡಿ ಸಾಂಕೇತಿಕವಾಗಿ ಗ್ರಾಹಕರೊಬ್ಬರಿಗೆ ಆಕ್ಸಿಮೀಟರ್ ನೀಡುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.