
ಪ್ರಜಾವಾಣಿ ವಾರ್ತೆ
ಬಳ್ಳಾರಿ: ನಗರದ ಹೊರವಲಯದ ಅಲ್ಲಿಪುರದಲ್ಲಿರುವ ಪವಾಡ ಪುರುಷ ಶ್ರೀ ಮಹಾದೇವ ತಾತಾನವರ ಜಾತ್ರಾ ಮಾಹೋತ್ಸವ ಮಂಗಳವಾರ ಸಂಜೆ ಜರುಗಿತು.
ತೇರು ಏಳೆದು, ಬಾಳೆ ಹಣ್ಣೂ, ಜವನ ಅರ್ಪಿಸಿದ ಸಾವಿರಾರು ಜನ ಭಕ್ತಿ ಭಾವ ಮೆರೆದರು.
ಮಠದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಬಳ್ಳಾರಿ, ವಿಜಯನಗರ, ಅನಂತಪುರ, ಕರ್ನೂರು ಸೇರಿದಂತೆ ಹಲವು ಜಿಲ್ಲೆಗಳಿಂದ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಾತನವರ ದರ್ಶನಾಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.