
ಪ್ರಜಾವಾಣಿ ವಾರ್ತೆ
ಸಿರುಗುಪ್ಪ: ನಗರದ ಹಳೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗಿನ ಜಾವ ಹಾಲು ಮತ್ತು ತುಪ್ಪದ ಹಾಗೂ ವಿವಿಧ ಫಲಗಳ ಅಭಿಷೇಕ ನಡೆಸಿ, ಬಗೆಬಗೆಯ ಹೂವುಗಳಿಂದ ಅಲಂಕರಿಸಿ ಮಹಾಮಂಗಳಾರತಿ ಜರುಗಿತು.
ವ್ರತ ನಿರತ ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಹೊತ್ತು ಶಬರಿಗಿರಿಗೆ ಪಯಣ ಬೆಳೆಸಿದರು. ಸಂಜೆ ದೇವಸ್ಥಾನದ ಆವರಣದಲ್ಲಿ ಮಡಿ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ಮಕರ ಜ್ಯೋತಿ ದರ್ಶನ ಪಡೆದರು.