ADVERTISEMENT

ಮರಿಯಮ್ಮನಹಳ್ಳಿ: ವಿಶೇಷ ಮಕ್ಕಳ ಶಾಲೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:19 IST
Last Updated 2 ಡಿಸೆಂಬರ್ 2025, 6:19 IST
ಮರಿಯಮ್ಮನಹಳ್ಳಿಯಲ್ಲಿ ಶನಿವಾರ ಹೊಸಪೇಟೆಯ ಸಾಧ್ಯ ವಿಶೇಷ ಮಕ್ಕಳ ಶಾಲೆ, ಪುನರ್ವಸತಿ ಕೇಂದ್ರದ ಉಪಕೇಂದ್ರವನ್ನು ವೈದ್ಯೆ ಡಾ.ಮಂಜುಳಾ ಉದ್ಘಾಟಿಸಿದರು.
ಮರಿಯಮ್ಮನಹಳ್ಳಿಯಲ್ಲಿ ಶನಿವಾರ ಹೊಸಪೇಟೆಯ ಸಾಧ್ಯ ವಿಶೇಷ ಮಕ್ಕಳ ಶಾಲೆ, ಪುನರ್ವಸತಿ ಕೇಂದ್ರದ ಉಪಕೇಂದ್ರವನ್ನು ವೈದ್ಯೆ ಡಾ.ಮಂಜುಳಾ ಉದ್ಘಾಟಿಸಿದರು.   

ಮರಿಯಮ್ಮನಹಳ್ಳಿ: ವಿಶೇಷ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿಪಟ್ಟನದಲ್ಲಿ ಸಂಸ್ಥೆಯ ವತಿಯಿಂದ ಉಪಕೇಂದ್ರವನ್ನು ತೆರೆಯಲಾಗಿದ್ದು, ಪೋಷಕರು ಸದುಪಯೋಗ ಪಡೆಸಿಕೊಳ್ಳಬೇಕೆಂದು ಸಾಧ್ಯ ಸಂಸ್ಥೆಯ ಸಂಸ್ಥಾಪಕಿ ಆರತಿ ಕೆ.ಟಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹೊಸಪೇಟೆಯ ಸಾಧ್ಯ ವಿಶೇಷ ಮಕ್ಕಳ ಶಾಲೆ, ಪುನರ್ವಸತಿ ಕೇಂದ್ರದ ಉಪಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶೇಷ ಶಿಕ್ಷಣ, ಪಿಜಿಯೋಥೆರಪಿ ಸೌಲಭ್ಯಗಳು ದಿನಾಲು ಇದ್ದು, ಸ್ಪೀಚ್ ಥೆರಪಿ ಮಾತ್ರ ಪ್ರತಿ ಗುರುವಾರ ಲಭ್ಯವಿರುತ್ತವೆ. ಇದರ ಸದುಪಯೋಗವನ್ನು ವಿಶೇಷ ಮಕ್ಕಳ ಪೋಷಕರು ಪಡೆದುಕೊಳ್ಳಬೇಕು. ತಮ್ಮ ಮಕ್ಕಳಷ್ಟೇ ಅಲ್ಲದೆ ಬೇರೆ ವಿಶೇಷ ಮಕ್ಕಳು ಕಂಡು ಬಂದಲ್ಲಿ ಸಂಸ್ಥೆಗೆ ತಿಳಿಸಿ ಎಂದರು.

ADVERTISEMENT

ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ.ಮಂಜುಳಾ, ಸ್ಪೀಚ್ ಥೆರಪಿಸ್ಟ್ ರಜಿಯ, ಸಂಧ್ಯಾ ಕುಲಕರ್ಣಿ, ಸಾವಿತ್ರಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.