ಹಗರಿಬೊಮ್ಮನಹಳ್ಳಿ: ‘ವಾಜಪೇಯಿ ಅವರ ಸಂಪುಟದಲ್ಲಿ ಮಂತ್ರಿ ಆದೋನು ನಾನು, ಈಗ ಯಾರಯಾರದೋ, ಅಂತಿಂಥವರ ಸಂಪುಟದಲ್ಲಿ ಸಚಿವನಾಗುವ ಗಿರಾಕಿ ನಾನಲ್ಲ’ ಎಂದು ಬಿಜಾಪುರ ಶಾಸಕಬಸನಗೌಡ ಪಾಟೀಲ ಯತ್ನಾಳ ಅವರು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು.
ಹಗರಿಬೊಮ್ಮನಹಳ್ಳಿ ಯಲ್ಲಿ ಶನಿವಾರ ಲಿಂಗಾಯತ ಪಂಚಮಸಾಲಿ ಸಮಾಜದ ಜನಜಾಗೃತ ಸಮಾವೇಶದಲ್ಲಿ ಮಾತನಾಡಿದರು.
ತಮಗೆ ಒದಗಿಸಿದ ಪೊಲೀಸ್ ಸೆಕ್ಯೂರಿಟಿ ಹಿಂಪಡೆದಿದ್ದಾರೆ, ಇಂಟೆಲಿಜೆನ್ಸ್ ಬಿಟ್ಟಿದ್ದಾರೆ ನಾಚಿಕೆ ಆಗಬೇಕು, ಅವರ ಮುತ್ತಜ್ಜ ಬಂದ್ರೂ ನನ್ನ ಏನೂ ಕಿತ್ತುಕೊಳ್ಳೋಕೆ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಆಸ್ತಿನೂ ಸಕ್ರಮ ವಾಗಿದೆ, ಏನು ಬೇಕಾದ್ರೂ ಮಾಡಲಿ ಎಂದು ಸವಾಲೆಸೆದರು.
ಯುವರಾಜ್‌ನನ್ನು ಮಂತ್ರಿ ಮಂಡಲ ವಿಸ್ತರಣೆ ಮಾಡಲು ಬಳಕೆ ಮಾಡಿಕೊಂಡು ಈಗ ಆತನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದರು.
ಸಚಿವ ಮುರುಗೇಶ್ ನಿರಾಣಿ ಬೆಕ್ಕಿನ ಜಾತಿಯವನು ಎಂದು ಕುಹಕ ಆಡಿದರು. 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು. ಭಾಷಣದುದ್ದಕ್ಕೂ ಸಿಎಂ ಮತ್ತು ಸಚಿವ ಮುರುಗೇಶ್ ನಿರಾಣಿಯವರನ್ನು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.