ಕೂಡ್ಲಿಗಿ: ನಿರಂತರ ಮಳೆಯಿಂದ ತುಂಬಿ ಕೋಡಿ ಬಿದ್ದ ಪಟ್ಟಣದ ಹೊರವಲಯದಲ್ಲಿನ ದೊಡ್ಡ ಕೆರೆ ಹಾಗೂ ತಾಲ್ಲೂಕಿನ ಗಂಡಬೊಮ್ಮನಹಳ್ಳಿ ಕೆರೆಗೆ ಬುಧವಾರ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಅವರು ಬಾಗಿನ ಆರ್ಪಿಸಿದರು.
ನಂತರ ಮಾತನಾಡಿದ ಅವರು, ‘ಈ ಬಾರಿ ನಿರಂತರ ಮಳೆಯಿಂದ ಕೆರೆ ಕಟ್ಟೆಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದು, ಅನೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಇದೇ ರೀತಿ ಪ್ರತಿ ವರ್ಷವೂ ಮಳೆ ಬಂದು ಉತ್ತಮ ಬೆಳೆ ಬೆಳೆಯಲು ದೇವರ ಕೃಪೆ ಇರಲಿ. ಆದರೆ ಅನೇಕ ಬಾರಿ ಮಳೆ ಇಲ್ಲದೆ ಬರಗಾಲ ಬರುತ್ತಿದ್ದು, ಕೆರೆಗಳು ಖಾಲಿಯಾಗಿ ಉಳಿಯಲಿವೆ. ಇದನ್ನು ತಪ್ಪಿಸಲು ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದು, ಶೀಘ್ರದಲ್ಲಿಯೇ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಸದಸ್ಯರಾದ ಕೆ. ಈಶಪ್ಪ, ತಳಾಸ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರಿಸಿದ್ದನಗೌಡ, ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನಗೌಡ, ಪೌರ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಪ್ರಭಾಕರ್, ಎ.ಎಂ.ವೀರಯ್ಯ, ಬಿ.ಕೆ.ರಾಘವೇಂದ್ರ, ಮಲ್ಲೇಶ್, ಸಿದ್ದೇಶ, ಮ್ಯಾಕೆ ಚಂದ್ರಪ್ಪ, ಕಡ್ಡಿ ಮಂಜುನಾಥ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.