ADVERTISEMENT

ಮೊಹರಂ; ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 15:40 IST
Last Updated 8 ಆಗಸ್ಟ್ 2022, 15:40 IST
ಮೊಹರಂ ಅಂಗವಾಗಿ ನೂರಾರು ಜನ ಸೋಮವಾರ ಹೊಸಪೇಟೆಯ ಭರಮಪ್ಪ–ರಾಮಲಿ ಸ್ವಾಮಿ ಮಸೀದಿ ಗೆ ಬಂದು ಪೀರಲ ದೇವರ ದರ್ಶನಕ್ಕೆ ಮುಗಿಬಿದ್ದರು
ಮೊಹರಂ ಅಂಗವಾಗಿ ನೂರಾರು ಜನ ಸೋಮವಾರ ಹೊಸಪೇಟೆಯ ಭರಮಪ್ಪ–ರಾಮಲಿ ಸ್ವಾಮಿ ಮಸೀದಿ ಗೆ ಬಂದು ಪೀರಲ ದೇವರ ದರ್ಶನಕ್ಕೆ ಮುಗಿಬಿದ್ದರು   

ಹೊಸಪೇಟೆ (ವಿಜಯನಗರ): ಮೊಹರಂ ಅಂಗವಾಗಿ ನೂರಾರು ಜನ ಸೋಮವಾರ ನಗರದ ಭರಮಪ್ಪ– ರಾಮಲಿ ಸ್ವಾಮಿ ಮಸೀದಿಗೆ ಭೇಟಿ ನೀಡಿ ಪೀರಲ ದೇವರ ದರ್ಶನ ಪಡೆದರು.

ಮಸೀದಿಯ ರಸ್ತೆಯಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಗಳು ತಲೆ ಎತ್ತಿದ್ದು, ವಿವಿಧ ಕಡೆಗಳಿಂದ ದಿನವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಟಿ.ಬಿ. ಡ್ಯಾಂ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಬಂದು ಸಕ್ಕರೆ ಬೆಲ್ಲದ ನೈವೇದ್ಯ ಸಮರ್ಪಿಸಿದ್ದರಿಂದ ಮಸೀದಿಯ ಬಳಿ ಅದರ ಗುಡ್ಡೆ ನಿರ್ಮಾಣವಾಗಿತ್ತು. ತುಂತುರು ಮಳೆಯನ್ನೂ ಲೆಕ್ಕಿಸದೇ ಭಕ್ತರು ಬಂದು ದೇವರ ದರ್ಶನ ಪಡೆದರು. ಪೀರಲ ದೇವರನ್ನು ಹೂಗಳಿಂದ ಅಲಂಕರಿಸಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಬೆಳಿಗ್ಗೆ ದರ್ಶನಕ್ಕೆ ಜನ ಮುಗಿಬಿದ್ದಿದ್ದರು. ಮುಸ್ಲಿಮರು ಸೇರಿದಂತೆ ವಿವಿಧ ಜಾತಿ, ಜನಾಂಗಗಳ ಜನ ಬಂದು ದರ್ಶನ ಪಡೆದರು.

ADVERTISEMENT

ಅನೇಕ ಮಕ್ಕಳು, ಯುವಕರು, ವಯಸ್ಕರು ಹುಲಿ ಹೋಲುವ ರೀತಿಯಲ್ಲಿ ಮೈಗೆ ಬಣ್ಣ ಬಳಿದುಕೊಂಡು, ತಮಟೆ ನಾದಕ್ಕೆ ಹೆಜ್ಜೆ ಹಾಕಿ ಹರಕೆ ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.