ADVERTISEMENT

ನಾಗತಿಬಸಾಪುರ : ಸಾಯಿ ಸನ್ನಿಧಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:11 IST
Last Updated 2 ಡಿಸೆಂಬರ್ 2025, 6:11 IST
ಹೂವಿನಹಡಗಲಿ ತಾಲ್ಲೂಕು ನಾಗತಿಬಸಾಪುರದ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು
ಹೂವಿನಹಡಗಲಿ ತಾಲ್ಲೂಕು ನಾಗತಿಬಸಾಪುರದ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು   

ಹೂವಿನಹಡಗಲಿ : ತಾಲ್ಲೂಕಿನ ನಾಗತಿಬಸಾಪುರ ಗ್ರಾಮದ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಶುಕ್ರವಾರ ಆಂಜನೇಯಸ್ವಾಮಿ ಹಾಗೂ ವನದುರ್ಗಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ಬೆಳಿಗ್ಗೆ ಗುರುವಂದನೆ, ಗೋಪೂಜೆ ನಂತರ ನೂತನ ಮೂರ್ತಿಗಳಿಗೆ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ನೆರವೇರಿಸಿ ಗ್ರಾಮ ಪ್ರದಕ್ಷಿಣೆ ಜರುಗಿತು. ಸನ್ನಿಧಿಯಲ್ಲಿ ನವಗ್ರಹ ಪೂಜೆ, ವಾಸ್ತುಶಾಂತಿ ಬಳಿಕ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಚೌಕಿಮಠದ ಗಾಡಿತಾತಾ, ಹಾಲಸ್ವಾಮಿ ಮಠದ ಗಿರಿರಾಜ ಹಾಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೂವಿನಹಡಗಲಿಯ ನಾವಿಕ ಪ್ರತಿಷ್ಠಾನದ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ADVERTISEMENT

ಸಾಯಿ ಸೇವಕರು, ಸಾಯಿ ದೀಕ್ಷಾ ಬಳಗದ ಸದಸ್ಯರು, ನಾಗತಿಬಸಾಪುರ ಸುತ್ತಮುತ್ತಲ ಗ್ರಾಮದ ಭಕ್ತರು ಭಾಗವಹಿಸಿದ್ದರು. ದಾವಣಗೆರೆಯ ಬಸವ ಕಲಾ ಬಳಗದವರ ಸಂಗೀತ ಕಾರ್ಯಕ್ರಮ ಮನೆಸೊರೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.