ADVERTISEMENT

ಬಳ್ಳಾರಿ | ಸುರಕ್ಷಿತ ಹೊಸ ವರ್ಷಾಚರಣೆಗೆ ಎಸ್‌ಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:18 IST
Last Updated 31 ಡಿಸೆಂಬರ್ 2025, 6:18 IST
ಶೋಭಾರಾಣಿ ವಿ.ಜೆ.
ಶೋಭಾರಾಣಿ ವಿ.ಜೆ.   

ಬಳ್ಳಾರಿ: ಹೊಸ ವರ್ಷಾಚರಣೆಯನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಸಂಭ್ರಮಿಸಲೆಂದು ಬೀದಿಗೆ ಇಳಿಯಬಾರದು. ವ್ಹೀಲಿ ಮಾಡುವುದು, ರಸ್ತೆಯಲ್ಲಿ ಕೇಕ್‌ ಕತ್ತರಿಸುವುದನ್ನು ಮಾಡಬಾರದು. ಇದನ್ನು ಪರಿಶೀಲಿಸಲು ಪೊಲೀಸ್‌ ಇಲಾಖೆಯಿಂದ ಮಧ್ಯರಾತ್ರಿಯೂ ಗಸ್ತು, ಪೆಟ್ರೋಲಿಂಗ್‌ ಇರಲಿದೆ’ ಎಂದು ತಿಳಿಸಿದರು.

‘ಹೊಸವರ್ಷದ ಬಂದೋಬಸ್ತ್‌ಗಾಗಿ ಜಿಲ್ಲೆಯಲ್ಲಿ ಒಟ್ಟು 24 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. 2 ಕೆಎಸ್‌ಆರ್‌ಪಿ ತುಕಡಿ, 6 ಡಿಎಆರ್‌ ತುಕಡಿ, 150 ಹೋಮ್‌ಗಾರ್ಡ್ಸ್‌, ನಾಲ್ವರು ಡಿಎಸ್‌ಪಿ, 15 ಪಿಐ, ಸಿಪಿಐಗಳು, 40 ಪಿಎಸ್‌ಐ, 72 ಎಎಸ್‌ಐ, 404 ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.