ಬಳ್ಳಾರಿ: ಬಳ್ಳಾರಿ ಜಿಲ್ಲಾ ಪತ್ರಿಕಾ ವಿತರಕರ ಸಂಘದಿಂದ ಇಲ್ಲಿನ ಶ್ರೀಕುಮಾರಸ್ವಾಮಿ ದೇವಸ್ಥಾನದ ಬಳಿ ಬುಧವಾರ ಪತ್ರಿಕಾ ವಿತರಕರ ದಿನಾಚರಣೆ ಜರುಗಿತು.
ಸುದ್ದಿಮನೆಯ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಮಹತ್ವ, ಎಂಥದ್ದೇ ಸಂದರ್ಭದಲ್ಲೂ ಬೆಳಗಿನ ಜಾವ ಜಗತ್ತಿನ ಆಗುಹೋಗುಗಳ ಸುದ್ದಿಹೊತ್ತು ತರುವ ವಿತರಕರ ಶ್ರಮ, ಸಮಯ ಪ್ರಜ್ಞೆ ಹಾಗೂ ಕಾಯಕನಿಷ್ಠೆಯನ್ನು ಈ ವೇಳೆ ಸ್ಮರಿಸಲಾಯಿತು.
ಪತ್ರಿಕೆ ವಿತರಣೆ ಸೇವೆ ನೀಡಿರುವ ನೆಮ್ಮದಿ, ಬದುಕು ಕಟ್ಟಿಕೊಳ್ಳಲು ಪೂರಕವಾದ ಸಹಾಯ, ಪತ್ರಿಕಾವಿತರಕರ ಅನೇಕ ಸಮಸ್ಯೆಗಳು, ಸವಾಲುಗಳು ಹಾಗೂ ಬೇಡಿಕೆಗಳ ಕುರಿತು ಹಿರಿಯ ಪತ್ರಿಕಾ ವಿತರಕರು ತಮ್ಮ ಅನುಭವ ಹಂಚಿಕೊಂಡರು.
ಪತ್ರಿಕಾವಿತರಕರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಪತ್ರಕರ್ತ ಕೆ.ಎಂ.ಮಂಜುನಾಥ್, ವಿತರಕರ ಸಂಘದ ಅಧ್ಯಕ್ಷ ಖಮ್ರುದ್ದೀನ್ ಹಾಗೂ ಒಪಿಡಿ ವೀರೇಶ್ ಅವರು ಚಾಲನೆ ನೀಡಿದರು.
ಇದೇ ವೇಳೆ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ವಿತರಕರಾದ ಶ್ರೀನಿವಾಸ್, ಎರಿಸ್ವಾಮಿ, ಪ್ರಸನ್ನದಿವಾಕರ, ರವಿಕುಮಾರ್, ಕೃಷ್ಣ, ಕಿರಣ್, ಗಣೇಶ್, ಖಲೀಲ್, ಮೋಹನ್, ಒಪಿಡಿ ವೀರೇಶ್, ಶಿವಕುಮಾರಸ್ವಾಮಿ, ಗೋಪಾಲ್, ಮಲ್ಲಿ, ನಾಗೇಶ್, ಮಂಜು, ಪರಶುರಾಮ, ವೆಂಕಟೇಶ್, ಶೇಕ್, ಇದ್ರೀಸ್, ಷಬ್ಬೀರ್ ಅಹ್ಮದ್, ಗೋವಿಂದ್, ವಿನೇಶ್ ಸೇರಿದಂತೆ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.