ADVERTISEMENT

ಎನ್‌ಎಂಡಿಸಿ ಪ್ರಾರಂಭಕ್ಕೆ ಒತ್ತಾಯಿಸಿ ಬಳ್ಳಾರಿ ಚಲೋ 14ರಂದು

ಚಲೋ 14ರಂದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 13:44 IST
Last Updated 4 ಜನವರಿ 2019, 13:44 IST
ಎಂ.ಆರ್.ಇಸ್ಮಾಯಿಲ್
ಎಂ.ಆರ್.ಇಸ್ಮಾಯಿಲ್   

ಬಳ್ಳಾರಿ:ಜಿಲ್ಲೆಯ ಸಂಡೂರು ತಾಲ್ಲೂಕಿನ ದೋಣಿಮಲೈನ ಕೇಂದ್ರ ಸರ್ಕಾರದ ಒಡೆತನದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಗಣಿಗಾರಿಕೆ ಪ್ರಾರಂಭಿಸಬೇಕು ಎಂದುಒತ್ತಾಯಿಸಲು ಜ.14ರಂದು ನಗರದಲ್ಲಿಬಳ್ಳಾರಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಹಾಗೂ ಐಎನ್‌ಟಿಯುಸಿಕಾರ್ಮಿಕ ಸಂಘಟನೆಗಳ ಕಾನೂನು ಸಲಹೆಗಾರ ಎಂ.ಆರ್.ಇಸ್ಮಾಯಿಲ್ ಹೇಳಿದರು.

ದೋಣಿಮಲೈಎನ್‌ಎಂಡಿಸಿ ಗಣಿಗಾರಿಕೆ ನಡೆಸಲು ಒಟ್ಟು ವಹಿವಾಟಿನಲ್ಲಿ ರಾಜ್ಯ ಸರ್ಕಾರಕ್ಕೆ ಶೇ 80ರಷ್ಟು ಹಣ ಪ್ರೀಮಿಯಮ್ ರೂಪದಲ್ಲಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ. 4ರಂದುಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಖಾಸಗಿ ಕಂಪನಿಗಳ ಕೈವಾಡವಿದೆಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ದೂರಿದರು.

ಗಣಿಗಾರಿಕೆ ಸ್ಥಗಿತದಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಸಾವಿರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ನೌಕರರನ್ನು ಕೆಲಸಕ್ಕೆ ಬರದಂತೆ ಹೇಳಿದ್ದು, ಮತ್ತೆ ಪ್ರಾರಂಭವಾದರೆ, ನಿಮ್ಮನ್ನೇ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ನೌಕರರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಗಣಿಗಾರಿಕೆಗೆ ಅವಕಾಶ ನೀಡಿ, ಪ್ರಸ್ತುತ ನಿಯಮಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಡಳಿತ ಮಂಡಳಿ ನಿರ್ದೇಶಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿಅದೇಶವನ್ನುರದ್ದುಗೊಳಿಸುವಂತೆಆಗ್ರಹಿಸಿಕಾರ್ಮಿಕರ ರಕ್ಷಣೆಗಾಗಿ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಜ.14ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಟಿ.ಜಿ.ವಿಠ್ಠಲ್, ಬಿ.ಸೋಮಶೇಖರ್, ವಿ.ಕರಿಬಸಪ್ಪ, ಪಿ.ಭಾಸ್ಕರ್ ರಾವ್, ಎಸ್.ಗೋಪಿ, ಪಿ.ವೀರಭದ್ರಪ್ಪ, ಆದಿ ಮೂರ್ತಿ, ತಿಪ್ಪೇಸ್ವಾಮಿ, ಗಂಗಾಧರ, ಗುರುಮೂರ್ತಿ, ಕಟ್ಟೆ ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.