ಹರಪನಹಳ್ಳಿ: ತಾಲ್ಲೂಕು ಕೃಷಿ ಮತ್ತು ಸಹಕಾರಿ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಆಡಳಿತ ಮಂಡಳಿಯ 6 ಸ್ಥಾನಗಳಿಗೆ ಭಾನುವಾರ ಅಪ್ಪರ ಮೇಗಳಪೇಟೆ ಶಾಲೆಯಲ್ಲಿ ಜರುಗಿದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ಬ್ಯಾಂಕ್ ನ ಒಟ್ಟು 14 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳು ಅವಿರೋಧ ಆಯ್ಕೆಯಾಗಿವೆ. ಉಳಿದ 6 ಸ್ಥಾನಗಳಿಗೆ ಮತದಾನ ಜರುಗಿತು. ಹರಪನಹಳ್ಳಿ ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ ಗೊಂಗಡಿ ನಾಗರಾಜ್, ಚಿಗಟೇರಿ ಹಿಂದುಳಿದ ಅ ವರ್ಗದಿಂದ ಸಾಬಳ್ಳಿ ಜಂಬಣ್ಣ, ಬಾಗಳಿ ಸಾಮಾನ್ಯ ಮೀಸಲು ಕ್ಷೇತ್ರಗಳಿಂದ ಭರಮನಗೌಡ ಕೂಲಹಳ್ಳಿ, ಪರಿಶಿಷ್ಟ ಪಂಗಡದಿಂದ ಮಂಜುನಾಥ ಕಮ್ಮಾರ, ತೊಗರಿಕಟ್ಟೆ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಶಕುಂತಲಾ ತೊಗರಿಕಟ್ಟೆ, ಹಲುವಾಗಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಡಿ.ಕಾಶಿನಾಥ ಬಹುಮತ ಪಡೆದು ಜಯಶಾಲಿಯಾಗಿದ್ದಾರೆ.
ಅವಿರೋಧ ಆಯ್ಕೆಯಾದವರು: ಹರಪನಹಳ್ಳಿ ಪಿ.ಬಿ.ಗೌಡ, ತೆಲಿಗಿ ಎಸ್.ಎಂ.ಚಿದಾನಂದ ಸ್ವಾಮಿ, ನೀಲಗುಂದ ಬೇಲೂರು ಸಿದ್ದೇಶ್, ಕಂಚಿಕೇರಿ ಶಾಂತಕುಮಾರ ರೆಡ್ಡಿ, ಅರಸೀಕೆರೆ ಸೌಭಾಗ್ಯಮ್ಮ, ಉಚ್ಚಂಗಿದುರ್ಗ ರಾಜಕುಮಾರ ಭರ್ಮಪ್ಪ, ಲಕ್ಷ್ಮಿಪುರ ಪಿ.ಎಲ್. ಪೋಮ್ಯನಾಯ್ಕ, ಸಾಲಪಡೆಯದ ಕ್ಷೇತ್ರದಿಂದ ಲಾಟಿ ದಾದಾಪೀರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಆಗಿದ್ದ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ತಿಳಿಸಿದರು.
ಸಹಾಯಕ ಚುನಾವಣೆ ಅಧಿಕಾರಿಗಳಾದ ಎಚ್.ಸಲೀಂ, ಮಂಜುನಾಥ್ ಇದ್ದರು. ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಎಲ್ಲ ನಿರ್ದೇಶಕರನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.