ADVERTISEMENT

ನಾಟಿ ವೈದ್ಯನ ಕೈಗುಣಕ್ಕೆ ಮನಸೋಲದವರಿಲ್ಲ

ವಿಶ್ವನಾಥ ಡಿ.
Published 1 ಜನವರಿ 2022, 10:20 IST
Last Updated 1 ಜನವರಿ 2022, 10:20 IST
ಬಾಗಳಿ ಹೊಸೂರಪ್ಪ
ಬಾಗಳಿ ಹೊಸೂರಪ್ಪ   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಅಪಘಾತಗಳಲ್ಲಿ ಕೈ ಕಾಲು ಮುರಿದುಕೊಂಡು ಬಂದ ಸಾವಿರಾರು ಜನರಿಗೆ ನಾಟಿ ವೈದ್ಯ ಪದ್ಧತಿ ಮೂಲಕ ಉಪಚರಿಸುತ್ತಿದ್ದಾರೆ ಬಾಗಳಿ ಹೊಸೂರಪ್ಪ. ಸ್ವತಃ ದೈಹಿಕವಾಗಿ ಅಂಗವೈಕಲ್ಯ ಹೊಂದಿದ್ದರೂ ಇತರರು ಅಂಗವಿಕಲರಾಗದಂತೆ ಕಾಳಜಿ ವಹಿಸುವುದು ಅವರ ವ್ಯಕ್ತಿತ್ವದ ಗುಣ.

ವಂಶ ಪಾರಂಪರ್ಯ ನಾಟಿ ವೈದ್ಯ ಪದ್ಧತಿ ಮಾಡಿಕೊಂಡಿದ್ದ ಬಾಗಳಿ ಕೆಂಚಪ್ಪ ಮತ್ತು ಶಂಕರಮ್ಮ ದಂಪತಿಯ ಪುತ್ರರಲ್ಲಿ ಇವರೂ ಒಬ್ಬರು. ಈ ದಂಪತಿ ತಮ್ಮ ಮಕ್ಕಳಿಗೂ ಔಷಧೋಪಚಾರ ಕಲಿಸಿದ್ದಾರೆ.ಕೆಂಚಪ್ಪ ಅವರ ನಿಧನ ಬಳಿಕ ಬಾಗಳಿ ಹೊಸೂರಪ್ಪ ಅವರು, ತಮ್ಮ ಸಹೋದರರಾದ ನಾಗರಾಜ, ಪರಶುರಾಮ ಅವರ ಸಹಕಾರದಿಂದ ತಮ್ಮ ಮನೆತನದ ನಾಲ್ಕು ತಲೆಮಾರಿನ ವೃತ್ತಿಯನ್ನು ಮುಂದುವರಿಸಿದ್ದಾರೆ.

ಕೀಲುಜೋಡಿ ಆಯತಪ್ಪಿದ್ದರೆ, ಸ್ಥಳದಲ್ಲೇ ಜೋಡಿಸಿ, ಜಂಟಿಯಾದ ನರಗಳನ್ನು ಸರಿಪಡಿಸುತ್ತಾರೆ. ಬೆನ್ನು ನೋವು, ಕಾಲು, ಮೊಣಕಾಲು ಮೂಳೆ ನೋವಿಗೆ ಇವರ ಚಿಕಿತ್ಸೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಅಪಘಾತಗಳಲ್ಲಿ ಸಮಸ್ಯೆಗೆ ಒಳಗಾದವರು ಇವರ ಬಳಿ ಬಂದು ಚಿಕಿತ್ಸೆ ಪಡೆಯುವುದು ನಿರಂತರ ನಡೆದಿದೆ.

ADVERTISEMENT

ಕಾಡು–ಮೇಡುಗಳಲ್ಲಿ ಅಲೆದಾಡಿ ಔಷಧಿ ಗಿಡಗಳ ಸೊಪ್ಪು ತಂದು ಅರೆದು ಔಷಧಿ ತಯಾರಿಸುತ್ತಾರೆ. ಇವರು ಸಿದ್ಧಪಡಿಸಿದ ಔಷಧಿಯನ್ನು ಹಾಲಿನಲ್ಲಿ ಬೆರೆಸಿ ತೆಗೆದುಕೊಂಡರೆ ಮುರಿದ ಕೈಕಾಲುಗಳು ಸರಿಯಾಗುತ್ತವೆ. ನರಗಳು ಒಂದಕ್ಕೊಂದು ತಳುಕು ಹಾಕಿಕೊಂಡು ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲೂ ಇವರು ಸಿದ್ಧ ಹಸ್ತರು.

ಕೇವಲ ನೂರು, ಎರಡು ನೂರು ರೂಪಾಯಿ ಪಡೆದು ಸೇವೆ
ಸಲ್ಲಿಸುತ್ತಿರುವ ಈ ಕುಟುಂಬದ ಸದಸ್ಯರು, ಬರುವ ಅಲ್ಪ ಆದಾಯದಲ್ಲಿ ಸಮುದಾಯ ಭವನ ಕಟ್ಟಿಸಿ ಸಾರ್ಥಕ ಸೇವೆ ಮಾಡುತ್ತಿದ್ದಾರೆ.

ತಮ್ಮ ತರ್ಕಕ್ಕೆ ನಿಲುಕದನೋವುಗಳಿಗೆ ಚಿಕಿತ್ಸೆ ಕೊಡುವ ಅಥವಾ ಸುಳ್ಳು ಭರವಸೆ ನೀಡುವ ಚಾಳಿ ಅವರದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.