ADVERTISEMENT

ಪ್ರಜಾವಾಣಿ ಸಾಧಕರು: ಕೂಲಿ ಕಾರ್ಮಿಕರ ಮಕ್ಕಳ ನೆಚ್ಚಿನ ಯೋಗ ಶಿಕ್ಷಕಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:27 IST
Last Updated 1 ಜನವರಿ 2022, 10:27 IST
ರಂಜಾನ್‌ಬಿ
ರಂಜಾನ್‌ಬಿ   

ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತಲಿನ ಕೂಲಿ ಕಾರ್ಮಿಕರ ಮಕ್ಕಳನ್ನು ಯೋಗ ಪಟುಗಳನ್ನಾಗಿ ಮಾಡಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ರಂಜಾನ್‌ಬಿ ಸದ್ದಿಲ್ಲದೇ ಮಾಡುತ್ತಿದ್ದಾರೆ. ಹಂಪಿಯಲ್ಲೇ ಹುಟ್ಟಿ ಬೆಳೆದಿರುವ ಇವರು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವೇಳೆ ಹಂಪಿ ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

ಇವರ ಗರಡಿಯಲ್ಲಿ ತರಬೇತಿ ಪಡೆದ 11ಕ್ಕೂ ಹೆಚ್ಚು ಮಕ್ಕಳು ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿ 11 ಪದಕಗಳನ್ನು ಜಯಿಸಿದ್ದಾರೆ. ಕಲಾವಿದೆಯೂ ಆಗಿರುವ ರಂಜಾನ್‌ಬಿ ಮಕ್ಕಳಿಗೆ ಚಿತ್ರಕಲೆಯನ್ನೂ ಹೇಳಿಕೊಡುತ್ತಿದ್ದಾರೆ. ವಾರಾಂತ್ಯಕ್ಕೆ ಹಂಪಿಯಲ್ಲಿ ಪರಿಸರ ನಡಿಗೆ, ಚಾರಣಕ್ಕೆ ಕರೆದೊಯ್ಯುತ್ತಾರೆ. ಎಲ್ಲೇ ಯೋಗ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರೂ ಅವರನ್ನು ಆ ಸ್ಪರ್ಧೆಗೆ ಸಜ್ಜುಗೊಳಿಸಿ, ಅಲ್ಲಿಗೆ ಕರೆದೊಯ್ದು ಪದಕ ಗೆಲ್ಲುವಂತೆ ಮಾಡುತ್ತಾರೆ. ಇವರ ಪತಿ ಟಿ. ಫಕ್ರುದ್ದೀನ್‌, ಜಿಮ್ ಟ್ರೈನರ್‌ ಆಗಿದ್ದು ಅವರು ಸಮಯ ಸಿಕ್ಕಾಗಲೆಲ್ಲಾ ಪತ್ನಿಗೆ ನೆರವಾಗುತ್ತಾರೆ. ಹೀಗೆ ಸತಿ–ಪತಿ ನಿಸ್ವಾರ್ಥದಿಂದ ಕೆಲಸ ಮಾಡಿ, ಮುಖ್ಯವಾಹಿನಿಯಿಂದ ದೂರ ಉಳಿದ ಮಕ್ಕಳಿಗೆ ಜ್ಞಾನ ಧಾರೆಯೆರೆದು ಸಶಕ್ತರನ್ನಾಗಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT