ಸಂಡೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವು
ಸಂಡೂರು: ಪಟ್ಟಣದ ಹೊರ ವಲಯದಲ್ಲಿನ ನಾರಿಹಳ್ಳದ ಮೂಲಕ ಗುರುವಾರ ಹೆಬ್ಬಾವೊಂದು ಜನ ವಸತಿ ಪ್ರದೇಶಕ್ಕೆ ನುಗ್ಗಿದ್ದರಿಂದ ಜನರು ಕೆಲ ಕಾಲ ಆತಂಕಕ್ಕೆ ಒಳಗಾದರು.
ಗುರುವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದ್ದರಿಂದ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ಹೆಬ್ಬಾವು ಮಳೆಯ ನೀರಿನ ಜೊತೆಗೆ ಹೊರ ಬಂದು ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿತು.
ಹೆಬ್ಬಾವು ಸುಮಾರು 13 ಅಡಿ ಉದ್ದವಿದ್ದು, ಸ್ಥಳದಲ್ಲಿದ್ದ ಲಾರಿ ಚಾಲಕರು ಅದನ್ನು ರಕ್ಷಿಸಿ ಸಂಡೂರಿನ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.