ADVERTISEMENT

ಹೂವಿನಹಡಗಲಿ | ಮಳೆ: ನೂರಾರು ಎಕರೆ ಭತ್ತದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:16 IST
Last Updated 9 ಅಕ್ಟೋಬರ್ 2024, 14:16 IST
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯಲ್ಲಿ ಭತ್ತದ ಬೆಳೆ ನೆಲಕ್ಕೆ ಒರಗಿರುವುದು
ಹೂವಿನಹಡಗಲಿ ತಾಲ್ಲೂಕು ಬ್ಯಾಲಹುಣ್ಸಿಯಲ್ಲಿ ಭತ್ತದ ಬೆಳೆ ನೆಲಕ್ಕೆ ಒರಗಿರುವುದು   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕೊರಗಿ  ಹಾಳಾಗಿದೆ.

ಹಡಗಲಿ ಹೋಬಳಿಯಲ್ಲಿ 5.8 ಮಿ.ಮೀ., ಹಿರೇಹಡಗಲಿ ಹೋಬಳಿಯಲ್ಲಿ 13.2 ಮಿ.ಮೀ. ಮಳೆಯಾಗಿದೆ. ಹ್ಯಾರಡ ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗಾಳಿ ಸಮೇತ ಮಳೆ ಸುರಿದಿದ್ದರಿಂದ ಬ್ಯಾಲಹುಣ್ಸಿ, ಮಕರಬ್ಬಿ, ಹಿರೇಬನ್ನಿಮಟ್ಟಿ, ಅಂಗೂರು, ಕೋಟಿಹಾಳ ಇತರೆ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಭತ್ತದ ಬೆಳೆ ನೆಲಕ್ಕೆ ಬಿದ್ದು ಹಾನಿಯಾಗಿದೆ.

‘ಗಾಳಿ ಮಳೆಯಿಂದ ಭತ್ತದ ಬೆಳೆ ಹಾನಿಗೀಡಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು’ ಎಂದು ಬ್ಯಾಲಹುಣ್ಸಿ ಗ್ರಾಮದ ರೈತ ಲಕ್ಷ್ಮಣ ಬಾರ್ಕಿ ಆಗ್ರಹಿಸಿದ್ದಾರೆ.

ADVERTISEMENT

ಮೆಕ್ಕೆಜೋಳ ಕಟಾವು ಮಾಡಿರುವ ರೈತರು ಫಸಲನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ರಸ್ತೆ, ಕಣಗಳಲ್ಲಿ ಒಣಗಲು ಹಾಕಿರುವ ಮೆಕ್ಕೆಜೋಳದ ರಾಶಿಗಳನ್ನು ತಾಡಪಾಲಿನಿಂದ ಮುಚ್ಚಿ ರಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.