ADVERTISEMENT

ತಂಪೆರೆದ ಸಂಜೆ ಮಳೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 13:55 IST
Last Updated 10 ಮೇ 2021, 13:55 IST
ಸೋಮವಾರ ಸಂಜೆ ಸುರಿದ ಮಳೆಯಿಂದ ಹಂಪಿ ರಥಬೀದಿಯಲ್ಲಿ ಸಂಗ್ರಹಗೊಂಡ ನೀರಿನಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರದ ಪ್ರತಿಬಿಂಬ ಕಂಡಿದ್ದು
ಸೋಮವಾರ ಸಂಜೆ ಸುರಿದ ಮಳೆಯಿಂದ ಹಂಪಿ ರಥಬೀದಿಯಲ್ಲಿ ಸಂಗ್ರಹಗೊಂಡ ನೀರಿನಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರದ ಪ್ರತಿಬಿಂಬ ಕಂಡಿದ್ದು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು.

ಬೆಳಿಗ್ಗೆಯಿಂದ ವಿಪರೀತ ಬಿಸಿಲು, ಸೆಕೆ ಇತ್ತು. ಸಂಜೆ ಏಕಾಏಕಿ ಕಾರ್ಮೋಡ ಕವಿದು, ಕೆಲಕಾಲ ಮಳೆಯಾಗಿದ್ದರಿಂದ ವಾತಾವರಣ ತಂಪಾಯಿತು.

ಕೋವಿಡ್‌ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಬಿಟ್ಟರೆ ಯಾರೊಬ್ಬರೂ ರಸ್ತೆಗಳಲ್ಲಿ ಇರಲಿಲ್ಲ. ಸಂಜೆ ಸುರಿದ ಮಳೆಗೆ ಅವರು ಕೂಡ ಕಟ್ಟಡಗಳ ಅಡಿ ಆಶ್ರಯ ಪಡೆದುಕೊಂಡಿದ್ದರಿಂದ ಪ್ರಮುಖ ರಸ್ತೆಗಳೆಲ್ಲ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ADVERTISEMENT

ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಧರ್ಮದಗುಡ್ಡ, ಕಾಳಘಟ್ಟ, ಬಸವನದುರ್ಗ, ನಾಗೇನಹಳ್ಳಿ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.