ADVERTISEMENT

ಸಂಡೂರು |₹41 ಸಾವಿರ ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಣೆ: ವಶಕ್ಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:53 IST
Last Updated 4 ಡಿಸೆಂಬರ್ 2025, 4:53 IST
<div class="paragraphs"><p>ಪಡಿತರ ಅಕ್ಕಿ</p></div>

ಪಡಿತರ ಅಕ್ಕಿ

   

ಸಂಡೂರು: ತಾಲ್ಲೂಕಿನ ಡಿ.ಅಂತಾಪುರ ಗ್ರಾಮದಿಂದ ತೋರಣಗಲ್ಲು ಗ್ರಾಮದ ಕಡೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಎರಡು ಆಟೊಗಳ ಮೇಲೆ ಆಹಾರ, ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಆಟೊ ಸಮೇತ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಈಚೆಗೆ ನಡೆದಿದೆ.

ಎರಡು ಆಟೊಗಳಲ್ಲಿನ ₹41 ಸಾವಿರ ಮೌಲ್ಯದ ಒಟ್ಟು 18 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಂಡೂರು ತಾಲ್ಲೂಕಿನ ಆಹಾರ ನಿರೀಕ್ಷಕ ಪ್ರದೀಪ್ ಅವರು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಈಚೆಗೆ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.