ADVERTISEMENT

ಈದ್‌–ಉಲ್‌–ಫಿತ್ರ ಸಂಭ್ರಮಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:46 IST
Last Updated 4 ಜೂನ್ 2019, 19:46 IST
ಈದ್‌–ಉಲ್‌–ಫಿತ್ರ ಪ್ರಯುಕ್ತ ಹೊಸಪೇಟೆಯ ಜಾಮೀಯ ಮಸೀದಿಗೆ ವಿದ್ಯುದ್ದೀಪಾಲಂಕಾರ ಮಾಡಿರುವುದು
ಈದ್‌–ಉಲ್‌–ಫಿತ್ರ ಪ್ರಯುಕ್ತ ಹೊಸಪೇಟೆಯ ಜಾಮೀಯ ಮಸೀದಿಗೆ ವಿದ್ಯುದ್ದೀಪಾಲಂಕಾರ ಮಾಡಿರುವುದು   

ಹೊಸಪೇಟೆ: ಈದ್‌–ಉಲ್‌–ಫಿತ್ರ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಸ್ಲಿಮ ಸಮುದಾಯ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಂಜಾನ್‌ ಮಾಸದ ಉಪವಾಸ ವ್ರತಾಚರಣೆ ದಿನಗಳು ಕೊನೆಗೊಳ್ಳಲು ಆರಂಭಿಸುತ್ತಿದ್ದಂತೆ ಹಬ್ಬಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದವು. ಎರಡ್ಮೂರು ದಿನಗಳಿಂದ ಅದು ಬಿರುಸುಗೊಂಡಿದೆ.

ಹೊಸ ಬಟ್ಟೆ, ಸಿಹಿ ಖಾದ್ಯಗಳನ್ನು ತಯಾರಿಸಲು ಅದಕ್ಕೆ ಅಗತ್ಯವಾದ ವಸ್ತುಗಳ ಖರೀದಿಯಲ್ಲಿ ಎರಡ್ಮೂರು ದಿನಗಳಿಂದ ಜನಜಾತ್ರೆ ಕಂಡು ಬರುತ್ತಿದೆ. ನಗರದ ಕೌಲ್‌ಪೇಟೆ, ಮೇನ್‌ ಬಜಾರ್‌ನಲ್ಲಿ ದಿನವಿಡೀ ಜನಜಂಗುಳಿ ಇರುತ್ತಿದೆ. ಬಟ್ಟೆ, ಪ್ರಾರ್ಥನೆಗೆ ಧರಿಸುವ ತಾಜ್‌ (ಟೋಪಿ), ಶಾವಿಗೆ, ಬಳೆ, ಅಲಂಕಾರಿಕ ವಸ್ತುಗಳನ್ನು ಮಂಗಳವಾರ ಸಂಜೆ ಮಾರುಕಟ್ಟೆಯಲ್ಲಿ ಖರೀದಿಸುತ್ತಿರುವುದು ಕಂಡು ಬಂತು.

ADVERTISEMENT

ಅನ್ಯ ಊರುಗಳಿಗೆ ಕೆಲಸದ ನಿಮಿತ್ತ ಹೋಗಿದ್ದವರು ಈಗಾಗಲೇ ಮನೆಗೆ ಹಿಂತಿರುಗಿದ್ದಾರೆ. ಹೀಗಾಗಿ ಸಂಭ್ರಮ ಇಮ್ಮಡಿಗೊಂಡಿದೆ. ಬುಧವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ನಗರದ ಪ್ರಮುಖ ಈದ್ಗಾಗಳಿಗೆ ಸುಣ್ಣ ಬಣ್ಣ ಅಳಿದು, ಇಡೀ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ಮಸೀದಿಗಳಿಗೆ ವಿದ್ಯುದ್ದೀಪಲಂಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.