ADVERTISEMENT

ಹೊಸಪೇಟೆ: ಗಣರಾಜ್ಯೋತ್ಸವಕ್ಕೆ ಮೆರಗು ತಂದ ಚಿಣ್ಣರು, ಎಲ್ಲೆಡೆ ತ್ರಿವರ್ಣ ಧ್ವಜ

ಆಕರ್ಷಕ ಪಥ ಸಂಚಲನ; ದೇಶಭಕ್ತಿ ಗೀತೆಗೆ ಮಕ್ಕಳ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 13:29 IST
Last Updated 26 ಜನವರಿ 2019, 13:29 IST
ನೇತಾಜಿ ಶಾಲೆಯ ಮಕ್ಕಳು ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಶನಿವಾರ ಸಮೂಹ ನೃತ್ಯ ಪ್ರದರ್ಶಿಸಿದರು
ನೇತಾಜಿ ಶಾಲೆಯ ಮಕ್ಕಳು ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಶನಿವಾರ ಸಮೂಹ ನೃತ್ಯ ಪ್ರದರ್ಶಿಸಿದರು   

ಹೊಸಪೇಟೆ: ನಗರ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಶನಿವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕು ಆಡಳಿತದಿಂದ ನಗರದ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಕಾರ್ಯಕ್ರಮಕ್ಕೆ ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹೊಸ ಮೆರಗು ತಂದುಕೊಟ್ಟಿತ್ತು. ತ್ರಿವರ್ಣ ಧ್ವಜಾರೋಹಣದ ಬಳಿಕ ಪೊಲೀಸ್‌, ಗೃಹರಕ್ಷಕ, ಎನ್‌.ಸಿ.ಸಿ. ಕೆಡೆಟ್‌, ಸ್ಕೌಟ್ಸ್‌ ಅಂಡ್‌ ಗೈಡ್ಸ್‌, ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ಮಾಡಿದರು.

ತ್ರಿವರ್ಣ ಧ್ವಜ ಹೋಲುವ ಟೀ ಶರ್ಟ್‌ ಧರಿಸಿದ್ದ ನೇತಾಜಿ ಶಾಲೆಯ ಮಕ್ಕಳು, ‘ಏ ದೇಶ್‌ ಹೈ ವೀರೋ ಕಾ’, ‘ವಂದೇ ಮಾತರಂ’, ‘ಯೆ ಮೇರೆ ಪ್ಯಾರೆ ವತನ್‌’ ಹಾಡಿಗೆ ಹೆಜ್ಜೆ ಹಾಕಿದರು. ಚೈತನ್ಯ ಟೆಕ್ನೊ ಶಾಲೆಯ ಮಕ್ಕಳು ‘ಮಾ ತುಜೆ ಸಲಾಂ’ ಹಾಡಿಗೆ ಆಕರ್ಷಕ ನೃತ್ಯ ಮಾಡಿದರು. ಇದೇ ವೇಳೆ ತಾಲ್ಲೂಕಿನ ಕಮಲಾಪುರದ ಎಸ್‌.ಎಸ್‌. ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಅನುಷಾ ಅವರು ಸಂವಿಧಾನದ ಪೀಠಿಕೆ ಓದಿ ಗಮನ ಸೆಳೆದರು.

ADVERTISEMENT

1,400 ವಿದ್ಯಾರ್ಥಿಗಳು ಸಾಮೂಹಿಕವಾಗಿ ಮಾಡಿದ ಕವಾಯತು ಕಣ್ಮನ ತಣಿಸಿತು. ಕವಾಯತಿನಲ್ಲಿ ನೇತಾಜಿ ಶಾಲೆಗೆ ಪ್ರಥಮ, ಚೈತನ್ಯ ಶಾಲೆಗೆ ದ್ವಿತೀಯ ಹಾಗೂ ಸಪ್ತಗಿರಿ ಶಾಲೆಗೆ ತೃತೀಯ ಬಹುಮಾನ ಒಲಿದು ಬಂತು.

ಪಥಸಂಚಲನದಲ್ಲಿ ಪಿ.ವಿ.ಎಸ್‌.ಬಿ.ಸಿ. ಪ್ರೌಢಶಾಲೆ ಪ್ರಥಮ, ಸುರಭಿ ಶಾಲೆ ದ್ವಿತೀಯ ಹಾಗೂ ಎಲ್‌.ಎಫ್‌.ಎಸ್‌. ಶಾಲೆ ತೃತೀಯ ಬಹುಮಾನಕ್ಕೆ ತೃಪ್ತಿಪಡಬೇಕಾಯಿತು. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ‘ಸಾಧ್ಯ’ ಬುದ್ಧಿಮಾಂದ್ಯ ವಸತಿಯುತ ಶಾಲೆಯ ಸುಶಾಂತ್‌ ಭೋಸ್‌, ವೀಣಾ ಎಚ್‌.ವಿ., ಓಂಕಾರ ಮಲ್ಲಪ್ಪ, ಸಾಯಿರಾಮ, ಛಲಪತಿ, ನವೀನಕುಮಾರ್‌ ಹಾಗೂ ಶಾಲೆಯ ಮುಖ್ಯಸ್ಥೆ ಆರತಿ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿ, ‘ದೇಶದ ಇತಿಹಾಸದಲ್ಲಿಯೇ ಜನವರಿ 26 ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಸಂವಿಧಾನ ಜಾರಿಗೆ ತಂದ ಸವಿನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.ನೂರಾರು ವರ್ಷಗಳಿಂದ ಶೋಷಣೆ, ದೌರ್ಜನ್ಯದಿಂದ ಬಳಲಿದ ದೀನ ದಲಿತರನ್ನು ಮುಕ್ತಗೊಳಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ’ ಎಂದರು.

‘ಸಂವಿಧಾನದಿಂದ ಸಾಮಾಜಿಕ ನ್ಯಾಯ ಸಾಧ್ಯ. ಜಾತಿ, ಮತ, ಧರ್ಮ ಮೀರಿ ಬೆಳೆಯಬೇಕು. ಸಂವಿಧಾನದಿಂದ ದಕ್ಕಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಷ್ಟ್ರದ ಬಲವರ್ಧನೆಗಾಗಿ ಮುಂದಾಗಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಎಚ್‌. ವಿಶ್ವನಾಥ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಕುಮಾರಿ, ನಗರಸಭೆ ಪೌರಾಯುಕ್ತ ವಿ. ರಮೇಶ್, ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ, ಡಿವೈಎಸ್ಪಿ ಶಿವಾರೆಡ್ಡಿ, ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ ಇದ್ದರು.

ಡಿ.ವೈ.ಎಫ್‌.ಐ.:

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನಿಂದ (ಡಿ.ವೈ.ಎಫ್‌.ಐ.) ಇಲ್ಲಿನ ಆಶ್ರಯ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಅಧ್ಯಕ್ಷ ಕಿನ್ನಾಳ ಹನುಮಂತ ಧ್ವಜಾರೋಹಣ ನೆರವೇರಿಸಿದರು.

ಕಾರ್ಯದರ್ಶಿ ಕಲ್ಯಾಣ್, ಇ. ಮಂಜುನಾಥ್, ವಿಜಯ, ಕುಲಾಯಪ್ಪ ಕೆ.ಎಂ.ಸಂತೋಷ, ನಾಗರತ್ನ, ಹನುಮಾ ನಾಯ್ಕ, ಬಸವರಾಜ್, ರಾಘವೇಂದ್ರ, ಅವಿನಾಶ್, ಅಕ್ಬರ್, ರಜಾಕ್, ಸೀನಪ್ಪ, ತಾಯಪ್ಪ, ಸುನಿಲ್, ವಿರೇಶ್, ಶಿವರಾಮ, ಸಂದೀಪ್ ಇದ್ದರು.

ಗುರು ಪದವಿಪೂರ್ವ ಕಾಲೇಜು:

ನಿವೃತ್ತ ಪ್ರಾಧ್ಯಾಪಕ ಪನ್ನಂಗಧರ ಧ್ವಜಾರೋಹಣ ಮಾಡಿದರು.ಪ್ರಾಧ್ಯಾಪಕರಾದ ವಿನೋದ್, ರಾಮಾಂಜನೇಯ, ವಸಂತ ರೆಡ್ಡಿ, ಪ್ರಸಾದ್ ಇದ್ದರು.

ಬಿಜೆಪಿ ಕಚೇರಿ:

ಪಕ್ಷದ ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ ಧ್ವಜಾರೋಹಣ ಮಾಡಿದರು.ನಗರಸಭೆ ಸದಸ್ಯ ಗೌಡ್ರ ರಾಮಣ್ಣ, ಮುಖಂಡರಾದ ಗುದ್ಲಿ ಪರಶುರಾಮ, ವಿಜಯೇಂದ್ರ, ಬಿಸಾಟಿ ಸತ್ಯನಾರಾಯಣ, ಬಸವರಾಜ ನಾಲತ್ವಾಡ್, ಮಧುಕರ್, ನಾಗರಾಜ್, ರಾಮಾಂಜಿನಿ, ಎಂ. ಶಂಕರ್ ಇದ್ದರು.

ಶಾಸಕರ ಕಚೇರಿ:

ಶಾಸಕ ಆನಂದ್‌ ಸಿಂಗ್‌ ಅವರ ಕಚೇರಿಯಲ್ಲಿ ಮುಖಂಡ ರತನ್‌ ಸಿಂಗ್‌ ಧ್ವಜಾರೋಹಣ ನೆರವೇರಿಸಿದರು.

ಮುಖಂಡರಾದಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್, ಗೋವಿಂದ ಕುಲಕರ್ಣಿ, ಶಿವಕುಮಾರ್, ಈಶ್ವರ್, ಎನ್.ವೆಂಕಟೇಶ್, ನಾಗಪ್ಪ, ಎಂ.ರಫಿಕ್, ಅಮಾಜಿ ಹೇಮಣ್ಣ, ತಮ್ಮನಳ್ಳೆಪ್ಪ, ನಿಂಬಗಲ್ ರಾಮಕೃಷ್ಣ, ಮಧುರ ಚೆನ್ನಶಾಸ್ತ್ರಿ, ಕಾಕುಬಾಳು ರಾಘವೇಂದ್ರ, ವಿಜಯಕುಮಾರ್, ಶಬ್ಬೀರ್, ಜಾವಿದ್, ಗಣೇಶ್, ನೂರ್, ಹನುಮಂತಪ್ಪ, ಎಸ್.ರಾಜು ಇದ್ದರು.

ಅಹನಾಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್:

ಸದಸ್ಯ ದಾಮೋದರರಾವ್ ಗೋಡಬೋಲೆ ಧ್ವಜಾರೋಹಣ ಮಾಡಿದರು.ಅಧ್ಯಕ್ಷ ಕೆ. ವೀರಭದ್ರಪ್ಪ, ಸದಸ್ಯರಾದ ಕೆ. ಉಮೇಶಪ್ಪ, ಪಿ. ಮಲ್ಲಿನಾಥ್, ಸಿ. ಕೆ. ತಿಪ್ಪೇಸ್ವಾಮಿ, ಕೆ. ಮಲ್ಲಿಕಾರ್ಜುನ ಇದ್ದರು.

ರಾಜ್ಯ ತಮಿಳು ಸಂಘದ ಕಚೇರಿ:

ಮುಖಂಡ ಪಿ. ಧರ್ಮಲಿಂಗಂ ಧ್ವಜಾರೋಹಣ ಮಾಡಿದರು.ಸಂಘಂದ ರಾಜ್ಯ ಉಪಾಧ್ಯಕ್ಷ ಎ. ಅಳಗಿರಿಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಪ.ಯ. ಗಣೇಶ, ಉಪಾಧ್ಯಕ್ಷ ಅಣ್ಣಾಮಲೈ, ಜಂಟಿ ಕಾರ್ಯದರ್ಶಿ ಟಿ.ಕೆ. ಧರ್ಮಲಿಂಗಂ, ಸಂಘಟನಾ ಕಾರ್ಯದರ್ಶಿ ಈ. ಭಾಸ್ಕರ, ಖಜಾಂಚಿ ಷಣ್ಮುಗಂ, ಕುಮಾರ್, ಶಿಕ್ಷಕ ಎಸ್. ಬಾಬು ಇದ್ದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಪ್ರಾಧ್ಯಾಪಕರಾದ ಕುರುಬರ ವೆಂಕಟೇಶ್‌,ಕೆ.ಶಿವಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಹೆಚ್. ಆರೆಂಟನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.