ADVERTISEMENT

ಕಂಪ್ಲಿ: ಗಮನಸೆಳೆದ 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:08 IST
Last Updated 27 ಜನವರಿ 2026, 5:08 IST
ಕಂಪ್ಲಿ ಬ್ರೈಟ್ ವೇ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಅಂಗವಾಗಿ 125 ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ ಸೋಮವಾರ ಪಟ್ಟಣದ ಸಾರ್ವಜನಿಕರ ಗಮನಸೆಳೆಯಿತು
ಕಂಪ್ಲಿ ಬ್ರೈಟ್ ವೇ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಅಂಗವಾಗಿ 125 ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ ಸೋಮವಾರ ಪಟ್ಟಣದ ಸಾರ್ವಜನಿಕರ ಗಮನಸೆಳೆಯಿತು   

ಕಂಪ್ಲಿ: ಇಲ್ಲಿಯ ಬ್ರೈಟ್ ವೇ ಇಂಗ್ಲಿಷ್‌ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಅಂಗವಾಗಿ 125 ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ ಸೋಮವಾರ ಪಟ್ಟಣದ ಸಾರ್ವಜನಿಕರ ಗಮನಸೆಳೆಯಿತು.

ಬಳಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಸ್ತುತ ಶಾಲೆಯಲ್ಲಿ ಅಭ್ಯಾಸ ಮಾಡಿ ವೈದ್ಯಕೀಯ ಶಿಕ್ಷಣದ ಪ್ರವೇಶ ಪಡೆದ ವಿದ್ಯಾರ್ಥಿಗಳು ಸೇರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಹಾಲಿ ಶಾಲೆಯಲ್ಲಿ ಅಭ್ಯಾಸ ಮಾಡಿ ಎಂಬಿಬಿಎಸ್ ಪದವಿ ಪ್ರವೇಶ ಪಡೆದ ತನು ಸಪ್ಪರದ, ಶ್ರಾವಣಿ, ಸಂಜನಾ, ಮನೋಜ್, ಪ್ರೀತಮ್ ಹಂದ್ರಾಳ್, ಸಾನಿಕ ಅಚ್ಚಪ್ಪ ಮತ್ತು ಬಿಡಿಎ ಪದವಿ ಪ್ರವೇಶ ಪಡೆದ ಜ್ಯೋತಿ ಉಗಾದಿ, ವೈಶಾಕ್ ಗೊಂದಿ, ಧೀರಜ್ ಅವರನ್ನು ಆಡಳಿತ ಮಂಡಳಿಯವರು ಗೌರವಿಸಿದರು.

ADVERTISEMENT

ತಾಲೂಕು ಬಣಜಿಗ ಮಹಿಳಾ ಸಂಘದ ಉಪಾಧ್ಯಕ್ಷೆ ವಿನುತಾ ಉಗಾದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಉಗಾದಿ ಶಿವರಾಜ, ಮುಖ್ಯಶಿಕ್ಷಕ ಕೆ. ಚಂದ್ರಶೇಖರ್, ಶಿಕ್ಷಕರಾದ ಮಹಮ್ಮದ್ ಷರೀಫ್, ಖಲಂದರ್, ಭವ್ಯಾ, ರಜಿನಿ, ಪ್ರಿಯಾಂಕ, ಭಾಗ್ಯ, ಭುನವೇಶ್ವರಿ, ಶ್ರೀಲತಾ, ಪ್ರಮುಖರಾದ ಡಾ. ಮಂಜುನಾಥ ಸಪ್ಪರದ, ಡಾ. ಅಶೋಕ್ ಹಂದ್ರಾಳ್, ಅಳ್ಳಳ್ಳಿ ವೀರೇಶ್, ಎಸ್.ಎಸ್. ನಾಗರಾಜ, ಅಜ್ಜಪ್ಪ ವಿಶ್ವನಾಥ್, ಶ್ರೀಧರಶ್ರೇಷ್ಠಿ, ಅನುಪಮಾ, ಸ್ಮಿತಾ ಸಪ್ಪರದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.