
ಕಂಪ್ಲಿ: ಸಂವಿಧಾನದ ಆಶಯ ಮತ್ತು ಮಹತ್ವವನ್ನು ಎಲ್ಲರು ಗೌರವಿಸಬೇಕು ಎಂದು ಇಲ್ಲಿಯ ತಹಶೀಲ್ದಾರ್ ಶಿವರಾಜ ತಿಳಿಸಿದರು.
ಸ್ಥಳೀಯ ಸಣಾಪುರ ರಸ್ತೆಯಲ್ಲಿ ಬುಧವಾರ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆ ಸ್ವಾಗತಿಸಿ ಮಾತನಾಡಿದರು.
ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಸಿ.ಆರ್. ಹನುಮಂತ, ಪ್ರಮುಖ ಕೆ. ಲಕ್ಷ್ಮಣ, ಎಚ್. ಶಕುಂತಲಾ, ಮಾರೇಶ್, ಹಾದಿಮನಿ ರಾಮಸ್ವಾಮಿ, ಸಿ.ಎ. ಚನ್ನಪ್ಪ, ಸಿ. ವೆಂಕಟೇಶ, ಪಿ.ಸಿ. ಅಂಜಿನಿ, ಕೃಷ್ಣ, ಅಂಜಿನಿಪ್ಪ, ತಾಲ್ಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಎಡಿ ಮಮತಾ, ನಿಲಯ ಪಾಲಕ ಕೆ. ವಿರುಪಾಕ್ಷಿ, ಇಸಿಒಗಳಾದ ಟಿ.ಎಂ. ಬಸವರಾಜ, ಜಿ. ವೀರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಪಿ. ಬಸವರಾಜ, ಕಂದಾಯ ನಿರೀಕ್ಷಕ ಜಗದೀಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಇದಕ್ಕೂ ಮುನ್ನ ತಾಲ್ಲೂಕಿನ ಎಮ್ಮಿಗನೂರು ಬಳಿಯ ಸೋಮಲಾಪುರ ಕ್ರಾಸ್‍ನಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಜೆ. ಶಾರದಾ ಜಡೆಮೂರ್ತಿ ಮತ್ತು ಸದಸ್ಯರು, ಪಿಡಿಒ ಲಕ್ಷ್ಮಣ ತಾರುನಾಯ್ಕ, ನೆಲ್ಲೂಡಿ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಜಯಮ್ಮ ಮತ್ತು ಸದಸ್ಯರು, ಪಿಡಿಒ ಹಾಲಹರವಿ ಶೇಷಗಿರಿ, ಸಣಾಪುರ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ವೈ. ರಮಣಯ್ಯ ಮತ್ತು ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.