ಹರಪನಹಳ್ಳಿ: ಕಲ್ಯಾಣ ಪಥ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಒಟ್ಟು ₹31.91 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಓಬಳಾಪುರ ಗ್ರಾಮದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ‘ವಡ್ಡಿನದಾದಾಪುರ ಗ್ರಾಮದಿಂದ ಕಾನಹಳ್ಳಿವರೆಗೆ 3.25 ಕಿ.ಮೀ ರಸ್ತೆ, ಹೊಸ ಓಬಳಾಪುರದಿಂದ ಶಾಲಾ ರಸ್ತೆವರೆಗೆ, ಹೊಂಬಳಗಟ್ಟಿ ರಸ್ತೆ ಅಭಿವೃದ್ಧಿ, ದ್ಯಾಪನಾಯಕನಹಳ್ಳಿಯಿಂದ ಹಳೆ ಒಬಳಾಪುರವರೆಗೆ ರಸ್ತೆ, ಜೋಶಿಲಿಂಗಾಪುರ ರಸ್ತೆ ಅಭಿವೃದ್ಧಿ, ಇಟ್ಟಿಗುಡಿ ಅಲಗಿಲವಾಡ ರಸ್ತೆ, ಕಡತಿ– ಖಂಡಿಕೇರಿ ರಸ್ತೆ, ನೀಲಗುಂದ ಗ್ರಾಮದಿಂದ ಚಿಕ್ಕಮಜ್ಜಿಗೇರಿ ನಡುವಿನ ರಸ್ತೆ, ಹೊನ್ನೆನಹಳ್ಳಿ, ಹಳ್ಳಿಕೇರಿ, ಶಿಂಗ್ರಿಹಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ, ಮತ್ತೂರು ಗ್ರಾಮದಿಂದ ಕುಂಚೂರು ರಸ್ತೆಯವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದರು.
ಓಬಳಾಪುರದಲ್ಲಿ ಹಾಲಸ್ವಾಮೀಜಿ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಮೈದೂರು ರಾಮಪ್ಪ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯಶಂಕರ, ಕೇಶವರೆಡ್ಡಿ, ಮತ್ತೂರು ಬಸವರಾಜ್, ಪ್ರಸಾದ್ ಹಾಗೂ ಮುಖಂಡರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.