ಹೊಸಪೇಟೆ: ತಾಲ್ಲೂಕಿನ ಇಂಗಳಗಿ ಕ್ರಾಸ್‌ನಿಂದ ಎಚ್‌ಎಲ್‌ಸಿ ವರೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನಗಳ ಸಂಚಾರ ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ.
ಬಳ್ಳಾರಿಯಿಂದ ಹೊಸಪೇಟೆ ನಗರಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇತರೆ ವಾಹನಗಳು ಬಳ್ಳಾರಿ ರಸ್ತೆಯ ಇಂಗಳಗಿ ಕ್ರಾಸ್‌ನಿಂದ ಬೈಪಾಸ್ ಮೂಲಕ ಜಂಬುನಾಥ ಗುಡ್ಡ ಬೈಪಾಸ್ ರಸ್ತೆ ಸರ್ಕಲ್, ಕಲ್ಲಹಳ್ಳಿ ಚೆಕ್‌ಪೋಸ್ಟ್ ಸರ್ಕಲ್‌ನಿಂದ ಸಂಡೂರು ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬೇಕು. ನಗರದಿಂದ ಬಳ್ಳಾರಿ ಕಡೆಗೆ ಹೋಗುವ ವಾಹನಗಳು ಬಳ್ಳಾರಿ ರಸ್ತೆ ಸರ್ಕಲ್, ಎಚ್‌ಎಲ್‌ಸಿ ಕಾಲುವೆ ಸೇತುವೆ, ಆಶ್ರಯ ಕಾಲೊನಿ, ಇಂಗಳಗಿ ಕ್ರಾಸ್ ಬೈಪಾಸ್ ಮೂಲಕ ಸಂಚರಿಸಬೇಕು. ರಸ್ತೆ ಸುರಕ್ಷತೆ, ಸುಗಮ ವಾಹನ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.