ADVERTISEMENT

ರೋಟರಿ ಕ್ಲಬ್‌ ಅಂತರರಾಷ್ಟ್ರೀಯ ಅಧ್ಯಕ್ಷ ಶೇಖರ್ ಮೆಹ್ತಾ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 13:27 IST
Last Updated 20 ಅಕ್ಟೋಬರ್ 2021, 13:27 IST
ಬುಧವಾರ ಹೊಸಪೇಟೆಗೆ ಭೇಟಿ ನೀಡಿದ ರೋಟರಿ ಕ್ಲಬ್‌ ಅಂತರರಾಷ್ಟ್ರೀಯ ಅಧ್ಯಕ್ಷ ಶೇಖರ್‌ ಮೆಹ್ತಾ ಅವರನ್ನು ಕ್ಲಬ್‌ ಸ್ಥಳೀಯ ಪದಾಧಿಕಾರಿಗಳು ಸ್ವಾಗತಿಸಿದರು
ಬುಧವಾರ ಹೊಸಪೇಟೆಗೆ ಭೇಟಿ ನೀಡಿದ ರೋಟರಿ ಕ್ಲಬ್‌ ಅಂತರರಾಷ್ಟ್ರೀಯ ಅಧ್ಯಕ್ಷ ಶೇಖರ್‌ ಮೆಹ್ತಾ ಅವರನ್ನು ಕ್ಲಬ್‌ ಸ್ಥಳೀಯ ಪದಾಧಿಕಾರಿಗಳು ಸ್ವಾಗತಿಸಿದರು   

ಹೊಸಪೇಟೆ(ವಿಜಯನಗರ): ರೋಟರಿ ಕ್ಲಬ್‌ ಅಂತರರಾಷ್ಟ್ರೀಯ ಅಧ್ಯಕ್ಷ ಶೇಖರ್ ಮೆಹ್ತಾ ಅವರು ಬುಧವಾರ ನಗರದ ರೋಟರಿ ಕ್ಲಬ್‌ಗೆ ಭೇಟಿ ನೀಡಿದರು.

ಇದಕ್ಕೂ ಮುನ್ನ ಅವರು ನಗರದ ವಿವಿಧ ಕಡೆ ರೋಟರಿ ಕ್ಲಬ್‌ನಿಂದ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದರು. ನಂತರ ಕ್ಲಬ್‌ಗೆ ಬಂದರು. ಅವರಿಗೆ ಕ್ಲಬ್‌ ಸದಸ್ಯರು ಸ್ವಾಗತ ಕೋರಿ ಬರಮಾಡಿಕೊಂಡರು.

ರೋಟರಿ ಕ್ಲಬ್‌ನ 59 ವರ್ಷಗಳ ಇತಿಹಾಸದಲ್ಲಿ ಹೊಸಪೇಟೆ ಕ್ಲಬ್‌ಗೆ ಅಂತರರಾಷ್ಟ್ರೀಯ ಅಧ್ಯಕ್ಷರ ಮೂರನೇ ಭೇಟಿ ಇದಾಗಿದೆ. ಮೆಹ್ತಾ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಭೇಟಿ ನೀಡಿದರು.

ADVERTISEMENT

ಶೇಖರ್ ಮೆಹ್ತಾ ಮಾತನಾಡಿ, ‘ರೋಟರಿ ಸಂಸ್ಥೆಯ ಡಯಾಲಿಸಿಸ್ ಆಸ್ಪತ್ರೆ, ಫಿಸಿಯೋಥೆರಪಿ ಆಸ್ಪತ್ರೆ,
ಆಪಿ ಆಸ್ಪತ್ರೆ ಹಾಗೂ ರೋಟರಿ ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನೂತನ ರಕ್ತ ಭಂಡಾರ ಹಾಗೂ ಐಸಿಯು ಆಂಬುಲೆನ್ಸ್‌ಗೆ ಚಾಲನೆ ನೀಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಮಹೇಶ್ ಕೊಡಬಾಗಿ, ಜಿಲ್ಲಾ ಗವರ್ನರ್ ತಿರುಪತಿ ನಾಯ್ಡು, ನಗರ ಘಟಕದ ಅಧ್ಯಕ್ಷ ರಾಜೇಶ್ ಕೋರಿ ಶೆಟ್ಟಿ, ಕಾರ್ಯದರ್ಶಿ ದೀಪಕ್‌ ಕೊಳಗದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.