ADVERTISEMENT

ಸಮಯಪ್ರಜ್ಞೆಗೆ ಬದುಕುಳಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:09 IST
Last Updated 4 ಆಗಸ್ಟ್ 2019, 13:09 IST

ಹೊಸಪೇಟೆ: ರೈಲ್ವೆ ಸುರಕ್ಷತಾ ಪಡೆಗಳಿಬ್ಬರ (ಆರ್‌.ಪಿ.ಎಫ್‌.) ಸಮಯ ಪ್ರಜ್ಞೆಯಿಂದ ಮಹಿಳಾ ಪ್ರಯಾಣಿಕರೊಬ್ಬರು ಬದುಕುಳಿದಿದ್ದಾರೆ.

ಭಾನುವಾರ ಬೆಳಿಗ್ಗೆ ಬೆಂಗಳೂರು–ಹುಬ್ಬಳ್ಳಿ ಹಂಪಿ ಎಕ್ಸಪ್ರೆಸ್‌ (ಗಾಡಿ ಸಂಖ್ಯೆ 16591) ರೈಲು ಮುನಿರಾಬಾದ್‌ ನಿಲ್ದಾಣದಿಂದ ಪ್ರಯಾಣ ಬೆಳೆಸಿತ್ತು. ಚಲಿಸುವ ರೈಲು ಹತ್ತುವಾಗ ಮಹಿಳೆಯ ಕಾಲು ಜಾರಿ ಪ್ಲಾಟ್‌ಫಾರಂನಲ್ಲಿ ಉರುಳಾಡುತ್ತ ರೈಲಿನಡಿ ಬೀಳುತ್ತಿದ್ದಾಗ ರೈಲಿನಲ್ಲಿದ್ದ ರೈಲ್ವೆ ಸುರಕ್ಷತಾ ಪಡೆಯ ಯೂನುಸ್‌ ಹಾಗೂ ಪ್ರೇಮಕುಮಾರ ಅದನ್ನು ಗಮನಿಸಿ, ಮಹಿಳೆಯನ್ನು ರೈಲಿನೊಳಗೆ ಎಳೆದುಕೊಂಡು, ಆಗಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿಸಿದ್ದಾರೆ.

ಮಹಿಳೆಗೆ ಗಾಯವಾಗಿದ್ದರಿಂದಕೂಡಲೇ ಚೈನ್‌ ಎಳೆದು, ರೈಲನ್ನು ಅಲ್ಲೇ ನಿಲ್ಲಿಸಿದ್ದಾರೆ.ನಂತರ ಅವರನ್ನು ನಗರದ ರೈಲು ನಿಲ್ದಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ನೈರುತ್ಯ ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.