ವಂಚನೆ (ಪ್ರಾತಿನಿಧಿಕ ಚಿತ್ರ)
ಬಳ್ಳಾರಿ: ವ್ಯವಹಾರದಲ್ಲಿ ಅಧಿಕ ಲಾಭ ಕೊಡಿಸುವುದಾಗಿ ಹೇಳಿ, ನೌಕರಿಯ ಆಮಿಷವೊಡ್ಡಿ ನಗರದ ವ್ಯಕ್ತಿಯೊಬ್ಬರಿಗೆ ₹33.50 ಲಕ್ಷ ವಂಚನೆ ಮಾಡಲಾಗಿದೆ.
ವಂಚನೆಗೀಡಾದ ವ್ಯಕ್ತಿ ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಸಂಜಯಗಾಂಧಿ ನಗರದ ರಮೇಶ್ ರಾಜ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೂರು ವರ್ಷಗಳ ಹಿಂದೆ ಸಹೋದ್ಯೋಗಿಯೊಬ್ಬರಿಂದ ಪರಿಚಿತವಾಗಿದ್ದ ರಮೇಶ್ ರಾಜ್, ತಾನು ವ್ಯಾಪಾರ–ವ್ಯವಹಾರ, ರಿಯಲ್ ಎಸ್ಟೇಟ್ ಮತ್ತು ಜಾಬ್ ಪ್ಲೇಸ್‌ಮೆಂಟ್ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ. ತಮ್ಮ ಬಳಿ ₹1 ಲಕ್ಷ ಹೂಡಿಕೆ ಮಾಡಿದರೆ, ಶೇ 50ರಷ್ಟು ಲಾಭಾಂಶ ನೀಡುವುದಾಗಿ ರಮೇಶ್ ರಾಜ್ ಹೇಳಿಕೊಂಡಿದ್ದ. ಜತೆಗೆ ಸ್ನೇಹಿತರೊಬ್ಬರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ.
ಆತನ ಮಾತು ನಂಬಿದ್ದ ವ್ಯಕ್ತಿ ಎರಡೂ ವರ್ಷಗಳ ಅವಧಿಯಲ್ಲಿ ₹33,50,000 ಹಣವನ್ನು ಹಂತ ಹಂತವಾಗಿ ಹಾಕಿದ್ದಾರೆ. ನಂತರ ಮೋಸ ಹೋಗಿರುವುದು ವ್ಯಕ್ತಿಯ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.