
ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಯು.ಉಬ್ಬಳಗಂಡಿ ಗ್ರಾಮದ ರೈತ ಹೊನ್ನೂರುಸ್ವಾಮಿ ಅವರ ಜಮೀನಿಗೆ ಮಂಗಳವಾರ ತಡರಾತ್ರಿ ಕಾಡು ಹಂದಿಗಳು ನುಗ್ಗಿ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿವೆ.
ಅಂದಾಜು ಒಂದು ಎಕರೆಯಷ್ಟು ಮೆಕ್ಕೆಜೋಳ ಫಸಲನ್ನು ನಾಶಪಡಿಸಿದ್ದು, ರೈತ ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್. ವೀರೇಶ್, ಜಂಬನಗೌಡ,ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹನುಮಂತ, ರೈತರಾದ ಹೊನ್ನುರಸ್ವಾಮಿ, ದುರುಗಣ್ಣ,ಲಕ್ಷ್ಮಣ, ಇತರರು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಹಂದಿಗಳ ಹಾವಳಿಯನ್ನು ತಕ್ಷಣ ನಿಯಂತ್ರಣ ಮಾಡಿ ಬಡ ರೈತರ ಜಮೀನುಗಳಲ್ಲಿನ ವಿವಿಧ ಬೆಳೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.