ಸಂಡೂರು: ತಾಲ್ಲೂಕಿನ ಹೊಸದರೋಜಿ ಗ್ರಾಮದಲ್ಲಿ ಕುಡಿಯುವ ನೀರಿನ, ಓಣಿಗಳಲ್ಲಿ ರಸ್ತೆಯ ಮೇಲೆ ಹರಿಯುವ ಚರಂಡಿಯ ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಎಚ್. ಶಿವರಾಮೆಗೌಡ ಬಣ) ಮುಖಂಡರು, ಸಾರ್ವಜನರಿಕರು ಗುರುವಾರ ಪಿಡಿಒ ಬೂದುಗುಂಪೆ ಫಕ್ಕಿರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಗ್ರಾಮ ಘಟಕದ ಅಧ್ಯಕ್ಷ ವಿ.ಪಾಂಡುರಂಗ ಮಾತನಾಡಿ, ‘ಹೊಸದರೋಜಿ ಗ್ರಾಮದ ಕೆಲ ವಾರ್ಡ್‍ಗಳಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಟ್ಯಾಂಕರ್‌ಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸಬೇಕು. ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಶೀಘ್ರವಾಗಿ ನಿವಾರಿಸಬೇಕು. ಗ್ರಾಮದ ಕೆಲ ಓಣಿಗಳಲ್ಲಿ ಚರಂಡಿಯ ನೀರು ಸಾರ್ವಜನಿಕ ಸಂಚಾರದ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕಾಗಿ ಸಮಸ್ಯೆಯಾಗಿದೆ. ನೂತನ ಚರಂಡಿಗಳನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ವಿ. ರಾಮಲಿಂಗ, ಯಂಕಪ್ಪ, ಪಕುರುದ್ದೀನ್‍ಸಾಬ್, ಕುಮಾರ್, ಹೇಮಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.