
ಬಳ್ಳಾರಿ: ಬಳ್ಳಾರಿಯ ‘ಸಂಗಂ ಟ್ರಸ್ಟ್’ ನೀಡುವ ‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಕಾವ್ಯ ಸಂಕಲನಗಳನ್ನು ಆಹ್ವಾನಿಸಿದೆ.
‘2023-25ರ ಅವಧಿಯಲ್ಲಿ ಪ್ರಥಮ ಮುದ್ರಣದ ರೂಪದಲ್ಲಿ ಪ್ರಕಟಗೊಂಡ ಕವನ ಸಂಕಲನವನ್ನು ಬರಹಗಾರರು ಮತ್ತು ಪ್ರಕಾಶಕರು ಸ್ಪರ್ಧೆಗೆ ಕಳುಹಿಸಬಹುದು. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ’ ಎಂದು ಸಂಗಂ ಸಂಸ್ಥೆ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ತಿಳಿಸಿದ್ದಾರೆ.
‘ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತಪ್ರತಿಗಳಿಗೆ, ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ‘ಸಂಗಂ’ ಸಮಿತಿಯ ತೀರ್ಮಾನವೇ ಅಂತಿಮ’ ಎಂದು ಅವರು ತಿಳಿಸಿದ್ದಾರೆ.
ಸಂಕಲನಗಳನ್ನು ಕಳುಹಿಸಬೇಕಾದ ವಿಳಾಸ: ಕೆ. ಶಿವಲಿಂಗಪ್ಪ ಹಂದಿಹಾಳು, ಮನೆ ಸಂಖ್ಯೆ : 44/C, ಚೇತನಾ ಕ್ಲಿನಿಕ್, ಪಕ್ಕ, ಜಿಮ್ ಖಾನಾ ರಸ್ತೆ, ಪಾರ್ವತಿ ನಗರ, ಬಳ್ಳಾರಿ. 583103. ದೂರವಾಣಿ ಸಂಖ್ಯೆ: 9980346474.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.