ADVERTISEMENT

ಶಾಲೆಗೆ ಬಂದು ಕಳೆ ಹೆಚ್ಚಿಸಿದರು

​ಪ್ರಜಾವಾಣಿ ವಾರ್ತೆ
Published 29 ಮೇ 2019, 12:30 IST
Last Updated 29 ಮೇ 2019, 12:30 IST
ಬುಧವಾರ ಶಾಲೆ ಆರಂಭಗೊಂಡ ಮೊದಲ ದಿನ‌ ಹೊಸಪೇಟೆಯ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿನಿಯರು ಬಂದರು
ಬುಧವಾರ ಶಾಲೆ ಆರಂಭಗೊಂಡ ಮೊದಲ ದಿನ‌ ಹೊಸಪೇಟೆಯ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿನಿಯರು ಬಂದರು   

ಹೊಸಪೇಟೆ: ಬೇಸಿಗೆ ರಜೆ ಬಳಿಕ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಬುಧವಾರ ಆರಂಭಗೊಂಡವು.

ಮಂಗಳವಾರವೇ ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೆಲವು ಶಾಲೆಗಳನ್ನು ತೋರಣಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಿಗ್ಗೆ ಮಕ್ಕಳು ಬರುತ್ತಿದ್ದಂತೆಶಾಲೆಗಳ ಕಳೆ ಹೆಚ್ಚಿತ್ತು. ಇಷ್ಟು ದಿನ ಮೌನವಾಗಿದ್ದ ಶಾಲೆಯ ಪರಿಸರದಲ್ಲಿ ಚಿಣ್ಣರ ಕಲರವ ಕೇಳಿ ಬಂತು.

ಕೆಲವು ಮಕ್ಕಳು ನಗು ಮುಖದಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದರೆ, ಕೆಲವು ಮಕ್ಕಳು ಭಾರದ ಮನಸ್ಸಿನೊಂದಿಗೆ ಶಾಲೆಗೆ ಹೋದರು. ಇನ್ನು ಕೆಲ ಮಕ್ಕಳು ಅಳುತ್ತ, ಅಮ್ಮನಿಗೆ ಟಾಟಾ ಹೇಳುತ್ತ ಪೆಚ್ಚು ಮುಖ ಮಾಡಿಕೊಂಡು ತರಗತಿಯೊಳಗೆ ಹೋದರು.

ADVERTISEMENT

ಶಾಲೆಯ ಮೊದಲ ದಿನವಾಗಿದ್ದರಿಂದ ಬಹುತೇಕ ಶಾಲೆಗಳಲ್ಲಿ ಹಾಜರಾತಿ ಬೆರಳೆಣಿಕೆಯಷ್ಟಿತ್ತು. ಮೊದಲ ದಿನ ಪರಸ್ಪರ ಪರಿಚಯ, ಅನೌಪಚಾರಿಕ ಮಾತುಗಳಿಗಷ್ಟೇ ತರಗತಿಗಳು ಸೀಮಿತವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.