ADVERTISEMENT

‘ಮಿಸ್ಟರ್‌ ಯೂನಿವರ್ಸ್‌’ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 15:47 IST
Last Updated 7 ಸೆಪ್ಟೆಂಬರ್ 2022, 15:47 IST
ಬಾಡಿ ಬಿಲ್ಡರ್‌ ಮಾರುತಿ ಬಿ.
ಬಾಡಿ ಬಿಲ್ಡರ್‌ ಮಾರುತಿ ಬಿ.   

ಹೊಸಪೇಟೆ (ವಿಜಯನಗರ): ‘ನವೆಂಬರ್‌ನಲ್ಲಿ ಜರ್ಮನಿಯಲ್ಲಿ ಹಮ್ಮಿಕೊಂಡಿರುವ ‘ಮಿಸ್ಟರ್‌ ಯೂನಿವರ್ಸ್‌ ಬಾಡಿ ಬಿಲ್ಡರ್‌’ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ನನಗಿದು ಹೆಮ್ಮೆಯ ಸಂಗತಿ’ ಎಂದು ಬಾಡಿ ಬಿಲ್ಡರ್‌ ಮಾರುತಿ ಬಿ. ತಿಳಿಸಿದರು.

‘ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಡರ್ಸ್‌ ಫೆಡರೇಶನ್‌ನಿಂದ ಸೆ. 4ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ 70ನೇ ರಾಷ್ಟ್ರ ಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನ ಗಳಿಸಿ, ಜರ್ಮನಿಯಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ’ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಜರ್ಮನಿಗೆ ಹೋಗಿ ಬರಲು ₹3 ಲಕ್ಷ ವೆಚ್ಚವಾಗಲಿದೆ. ದಾನಿಗಳು, ಕ್ರೀಡಾಭಿಮಾನಿಗಳು ನೆರವು ನೀಡಿ, ದೇಶದ ಕೀರ್ತಿ ಹೆಚ್ಚಿಸಲು ಸಹಕರಿಸಬೇಕೆಂದು ಕೋರಿದರು.

ADVERTISEMENT

9 ಬಾರಿ ‘ಮಿಸ್ಟರ್ ಕರ್ನಾಟಕ’, 8 ಬಾರಿ ‘ಮಿಸ್ಟರ್ ಹೈದರಾಬಾದ್ ಕರ್ನಾಟಕ’ ಪ್ರಶಸ್ತಿಗಳು ಬಂದಿವೆ. ಈ ಸ್ಪರ್ಧೆಗೆ ಅಣಿಯಾಗಬೇಕಾದರೆ ಸಾಕಷ್ಟು ಶ್ರಮ ವಹಿಸಬೇಕು. ಖರ್ಚು ಕೂಡ ಇದೆ. ಸಣ್ಣ ಜಿಮ್‌ ಮೂಲಕ ಉಪಜೀವನದ ಜೊತೆಗೆ ಕ್ರೀಡೆಯಲ್ಲೂ ಮುಂದುವರೆಯುತ್ತಿರುವೆ ಎಂದು ಹೇಳಿದರು.

ಬಾಡಿ ಬಿಲ್ಡರ್ಸ್‌ಗಳಾದ ಎಚ್‌. ಪ್ರಕಾಶ, ಉಮೇಶ ಗುಜ್ಜಲ, ಮಂಜುನಾಥ ರಾಥೋಡ, ಕೃಷ್ಣ ಹೇಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.