ADVERTISEMENT

ಶನಿದೇವರ ಪ್ರತಿಷ್ಠಾಪನೆ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:59 IST
Last Updated 13 ಆಗಸ್ಟ್ 2019, 14:59 IST
ಶನಿದೇವರ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ಹೊಸಪೇಟೆಯಲ್ಲಿ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು
ಶನಿದೇವರ ಪ್ರತಿಷ್ಠಾಪನೆ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ಹೊಸಪೇಟೆಯಲ್ಲಿ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು   

ಹೊಸಪೇಟೆ: ಶನೇಶ್ವರ ದೇವಸ್ಥಾನದ ಶನಿದೇವರ ಪ್ರತಿಷ್ಠಾಪನೆಯ 22ನೇ ವಾರ್ಷಿಕೋತ್ಸವ ಪ್ರಯುಕ್ತ ನಗರ ಹೊರವಲಯದ ಪಂಚಾಚಾರ್ಯ ನಗರದಲ್ಲಿರುವ ದೇಗುಲದಲ್ಲಿ ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಶನಿದೇವರ ಉತ್ಸವ ಮೂರ್ತಿಯೊಂದಿಗೆ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿ, ಗಂಗೆಯನ್ನು ತರಲಾಯಿತು. ನಂತರ ವಿಘ್ನೇಶ್ವರ, ಶನೇಶ್ವರ ಮತ್ತು ಜೇಷ್ಠಾದೇವಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಮಾಡಲಾಯಿತು.

ಶಾಂತಲಿಂಗೇಶ್ವರ, ನಂದಿ, ಶಾಂಭವಿಮಾತೆ, ಕಾಳಿಕಾ ಕಮಟೇಶ್ವರ ಸ್ವಾಮಿ ಹಾಗೂ ನವಗ್ರಹಗಳಿಗೆ ವಿಶೇಷ ಪೂಜೆ ಜರುಗಿದವು. ಗೊಗ್ಗ ವಿಶ್ವನಾಥ ಕುಟುಂಬದವರು ಹೋಮ, ಪೂಜೆ ನೆರವೇರಿಸಿದರು. ವಿವಿಧ ಕಡೆಗಳಿಂದ ಭಕ್ತರು ಬಂದಿದ್ದರು. ಸೋಮವಾರಶನೇಶ್ವರ ದೇವರ ಪುರಾಣ, ಪ್ರವಚನ ಹಾಗೂ ಭಜನೆ ನಡೆಯಿತು.

ADVERTISEMENT

ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಶಾಂತವೀರನಗೌಡ್ರು, ಕಾರ್ಯದರ್ಶಿ ಎನ್.ಆಂಜನೇಯ, ಗೌರವ ಅಧ್ಯಕ್ಷ ಕೆ.ಈರಣ್ಣ, ನಿರ್ದೇಶಕರಾದ ಕೆ.ಎಂ.ಶರಣಯ್ಯ, ವಿ.ಕೊಟ್ರೇಶ, ಎಂ.ಮಲ್ಲಿಕಾರ್ಜುನ, ಕೆ.ಎಂ.ಚನ್ನಮ್ಮ, ಎನ್.ಮಂಜುನಾಥ, ಎಸ್.ನಿರಂಜನ, ಮುಖಂಡರಾದ ಬಿ.ಹಾಲನಗೌಡ್ರು, ರುದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.