
ತೆಕ್ಕಲಕೋಟೆ: ಪಟ್ಟಣದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮ ಸಮಾರೋಪ ಹಾಗೂ 29ನೇ ವರ್ಷದ ಕುಂಭೋತ್ಸವ ಕಾರ್ಯಕ್ರಮವು ಚಿಪ್ಪಿಗ ಸಮಾಜದ ಬಂಧುಗಳಿಂದ ಸಂಭ್ರಮದಿಂದ ಭಾನುವಾರ ಜರುಗಿತು.
ಬೆಳಿಗ್ಗೆ ಕಾಡಸಿದ್ದೇಶ್ವರ ದೇವಸ್ಥಾನ ಆವರಣದ ಮುಂದಿನ ಬಾವಿಗೆ ಗಂಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ 10 ಜನ ಮಹಿಳೆಯರಿಗೆ ಉಡಿ ತುಂಬಿ ವಿಶೇಷ ಪೂಜೆಯ ನಂತರ 18 ಪೂರ್ಣಕುಂಭ ಹೊತ್ತ ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ತಾಷ, ತಪ್ಪಡಿ, ಸಮಾಳ, ನಂದಿಕೋಲು, ವೀರಗಾಸೆ ಹಾಗೂ ಸಕಲ ಮಂಗಳ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರಿಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ದೇವಸ್ಥಾನದಲ್ಲಿ ಶಂಕರಲಿಂಗ ಮೂರ್ತಿಗೆ ಮಹಾ ಅಭಿಷೇಕ, ಸಹಜ್ರ ನಾಮಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು.
ಕುಮಾರಿ ಸಾನಿಧ್ಯ ಹಾಗೂ ಕುಮಾರಿ ಪ್ರಜ್ಞ ಇವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಚಿಪ್ಪಿಗ ಸಮಾಜದ ಮುಖಂಡರಾದ ಶಾಬಾದಿ ಶಿವಲಿಂಗಪ್ಪ, ಮಲ್ಲಯ್ಯ ಎನ್, ಶ್ರೀಪಾದ ಶಾಬಾದಿ, ಸುಧಾಕರ, ವೀರೆಂದ್ರ ಎಸ್, ಶಾಬಾದಿ ಪ್ರಸಾದ್, ಸಿದ್ದಲಿಂಗೇಶ್ವರ, ರಮೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.