ADVERTISEMENT

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷ: ₹16.82 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:37 IST
Last Updated 28 ಜನವರಿ 2026, 7:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ ಕೊಡಿಸುವ ಆಮಿಷವೊಡ್ಡಿ ನಗರದ ವ್ಯಕ್ತಿಯೊಬ್ಬರಿಗೆ ₹16.82 ಲಕ್ಷ ಹಣ ವಂಚಿಸಲಾಗಿದೆ. 

ಈ ಕುರಿತು ನಗರದ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. 

ದೂರುದಾರ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಕಳೆದ ತಿಂಗಳು ಅಪರಿಚಿತ ಸಂಖ್ಯೆಯಿಂದ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜಾಹಿರಾತು ಬಂದಿತ್ತು. ಆದನ್ನು ಕ್ಲಿಕ್‌ ಮಾಡಿದ ವ್ಯಕ್ತಿ ಗ್ರೂಪ್‌ವೊಂದಕ್ಕೆ ಸೇರಿದ್ದರು. ಅಲ್ಲಿ ಷೇರು ಮಾರುಕಟ್ಟೆ ಕುರಿತು ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಬಳಿಕ ಶೇ 15ರ ಆಮಿಷವೊಡ್ಡಿ ಹಂತ ಹಂತವಾಗಿ ₹16,82,047 ಹಣ ಹಾಕಿಸಿಕೊಳ್ಳಲಾಗಿದೆ. 

ADVERTISEMENT

ಆದರೆ, ಇದು ಮೋಸದ ಜಾಲ ಎಂದು ತಿಳಿದ ವ್ಯಕ್ತಿ ಕಡೆಗೆ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ. ಲಾಭಾಂಶದ ಆಸೆಗೆ ಬಿದ್ದು ದೂರುದಾರ ವ್ಯಕ್ತಿ ತನ್ನ ಸಂಬಂಧಿಗಳಿಂದಲೂ ದುಡ್ಡು ಪಡೆದು ಹೂಡಿಕೆ ಮಾಡಿದ್ದರು ಎನ್ನಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.