
ಕೂಡ್ಲಿಗಿ: ತಾಲ್ಲೂಕಿನ ಲೋಕಿಕೆರೆ ಗ್ರಾಮದ ಲಕ್ಕಜ್ಜಿ ಸಹೋದರರು ತಮ್ಮ ಖಾಸಗಿ ಲೇಔಟ್‌ಗೆ ಶ್ರೀ ಸಿದ್ದರಾಮಯ್ಯ ನಗರ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ತಮ್ಮ ಅಭಿಮಾನವನ್ನು ಅಭಿವ್ಯಕ್ತಗೊಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಅಭಿಮಾನಿಯಾಗಿರುವ ಲಕ್ಕಜ್ಜಿ ಮಲ್ಲಿಕಾರ್ಜುನ ಹಾಗೂ ಅವರ ಸಹೋದರ ಲಕ್ಕಜ್ಜಿ ರಾಮಾಂಜನಿ ಅವರು ತಮ್ಮ ತಾಯಿ ರತ್ನಮ್ಮ ಹೆಸರಲ್ಲಿರುವ 1.50 ಎಕರೆ ಜಮೀನನ್ನು ನಿವೇಶನವನ್ನಾಗಿ ಪರಿವರ್ತಿಸಿದ್ದು, ಅದಕ್ಕೆ ಶ್ರೀ ಸಿದ್ದರಾಮಯ್ಯ ನಗರ ಎಂದು ನಾಮಕರಣ ಮಾಡಿದ್ದಾರೆ.
ಲೇಔಟ್‌ನ ಒಂದು ನಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿ, ಅಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಲಕ್ಕಜ್ಜಿ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಲಕ್ಕಜ್ಜಿ ಸಹೋದರರು ತಮ್ಮ ತಾಯಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಗ್ರಾಮದ ಹಿರಿಯರೊಂದಿಗೆ ಗುರುವಾರ ಲೇಔಟ್ ಬಳಿ ಶ್ರೀ ಸಿದ್ದರಾಮಯ್ಯ ನಗರ ಎಂಬ ಹೆಸರಿನೊಂದಿಗೆ ಅವರ ಭಾವಚಿತ್ರವಿರುವ ನಾಮಫಲಕ ಅನಾವರಣ ಮಾಡಿದರು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ದಾನೇಶ್, ಉಪಾಧ್ಯಕ್ಷ ಶಿವರಾಂ, ಕಾಂಗ್ರೆಸ್ ಮುಖಂಡರಾದ ನಾಗೇಶ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಲಕ್ಕಜ್ಜಿ ಅಂಜನೇಯ, ನಾಗರಾಜ, ಲಕ್ಕಜ್ಜಿ ಮಂಜುನಾಥ, ಶಿವು, ನಿರಂಜನ, ಪರುಶಪ್ಪ, ಜಿ. ನಾಗರಾಜ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.