ADVERTISEMENT

ಶ್ರೀರಾಮರಂಗಾಪುರ: ಪತ್ತೆಯಾಗದ ಮೃತದೇಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 2:33 IST
Last Updated 12 ಸೆಪ್ಟೆಂಬರ್ 2020, 2:33 IST
ಕಂಪ್ಲಿ ತಾಲ್ಲೂಕು ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನಹಳ್ಳದÀ ತಾತ್ಕಾಲಿಕ ಸೇತುವೆ ದಾಟುವಾಗ ಶಿವಪ್ಪ ಹೊನ್ನೂರಪ್ಪ ಎಂಬುವವರು ಗುರುವಾರ ಕಾಲುಜಾರಿ ಬಿದ್ದು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
ಕಂಪ್ಲಿ ತಾಲ್ಲೂಕು ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನಹಳ್ಳದÀ ತಾತ್ಕಾಲಿಕ ಸೇತುವೆ ದಾಟುವಾಗ ಶಿವಪ್ಪ ಹೊನ್ನೂರಪ್ಪ ಎಂಬುವವರು ಗುರುವಾರ ಕಾಲುಜಾರಿ ಬಿದ್ದು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು   

ಕಂಪ್ಲಿ: ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನ ಹಳ್ಳದ ತಾತ್ಕಾಲಿಕ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಿವಪ್ಪ ಹೊನ್ನೂರಪ್ಪ(55) ಅವರ ಮೃತದೇಹ ಶುಕ್ರವಾರವೂ ಪತ್ತೆಯಾಗಿಲ್ಲ.

ರಾಮರಂಗಾಪುರದಿಂದ ಓರ್ವಾಯಿ ಗ್ರಾಮದ ವರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಮೃತ ದೇಹಕ್ಕಾಗಿ ಹಳ್ಳದಲ್ಲಿ ಶೋಧ ಕಾರ್ಯನಡೆಸಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ ಪ್ರತಿಕ್ರಿಯಿಸಿ, ‘ಹಳ್ಳದಲ್ಲಿ ಮುಳ್ಳು ಬೇಲಿ, ಗಿಡಗಂಟಿಗಳು, ತ್ಯಾಜ್ಯ ಅಧಿಕವಾಗಿದೆ. ರಬ್ಬರ್ ಬೋಟ್ ಬಳಸಲು ಸಾಧ್ಯವಾಗಿಲ್ಲ. 11ಜನ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸ್ಥಳೀಯರೂ ತೆಪ್ಪಗಳನ್ನು ಬಳಸಿದರು ಪ್ರಯೋಜನವಾಗಿಲ್ಲ. ಸಂಜೆ ಮಳೆಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ‘ ಎಂದು ವಿವರಿಸಿದರು.

ADVERTISEMENT

‘ಶನಿವಾರ ಬೆಳಿಗ್ಗೆಯಿಂದ ಓರ್ವಾಯಿ ಗ್ರಾಮದ ಹಳ್ಳದಿಂದ ಶೋಧ ಮುಂದುವರಿಯಲಿದೆ’ ಎಂದರು.

ತಹಶೀಲ್ದಾರ್ ಗೌಸಿಯಾಬೇಗಂ, ಕುಡುತಿನಿ ಪಿಎಸ್‍ಐ ರಫಿಕ್, ಎಎಸ್‍ಐ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ನಾಯ್ಕ, ಪಿಡಿಒ ಅಪರಂಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.