ಬಳ್ಳಾರಿ: ಎಸ್‌ಎಸ್‌ಎಲ್‌ಸಿ–2 ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ 48.54ರಷ್ಟು ಫಲಿತಾಂಶ ದಾಖಲಾಗಿದೆ. ಒಟ್ಟು 5,973 (ಸಾಮಾನ್ಯ) ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,899 ಉತ್ತೀರ್ಣರಾಗಿದ್ದಾರೆ.
ಬಳ್ಳಾರಿ ಪೂರ್ವ ವಲಯದಲ್ಲಿ ಹಾಜರಾದ 1,828 ವಿದ್ಯಾರ್ಥಿಗಳ ಪೈಕಿ 1,164 ಮಂದಿ (ಶೇ63.68), ಸಂಡೂರು ತಾಲ್ಲೂಕಿನಲ್ಲಿ ಹಾಜರಾದ 796 ವಿದ್ಯಾರ್ಥಿಗಳಲ್ಲಿ 361 ಮಂದಿ (ಶೇ 45.38), ಕುರುಗೋಡು ತಾಲ್ಲೂಕಿನಲ್ಲಿ ಹಾಜರಾದ ಒಟ್ಟು 2,643 ವಿದ್ಯಾರ್ಥಿಗಳ ಪೈಕಿ 1164 ಮಂದಿ (ಶೇ 44.08), ಸಿರುಗುಪ್ಪ ತಾಲೂಕಿನಲ್ಲಿ ಹಾಜರಾದ ಒಟ್ಟು 706 ವಿದ್ಯಾರ್ಥಿಗಳ ಪೈಕಿ 209 ಮಂದಿ (29.60) ಪಾಸಾಗಿದ್ದಾರೆ.
ಪರೀಕ್ಷೆ–3 ಶೀಘ್ರದಲ್ಲೇ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.